ಬಜ್ಪೆ :ತಾ.ಪಂ.ಗೆ ಎಸ್‌ಡಿಪಿಐ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
Update: 2016-02-06 21:24 IST
ಮಂಗಳೂರು, ಫೆ. 6: ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಜ್ಪೆ ತಾ.ಪಂ.ಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ)ನಿಂದ ಶಹನಾಝ್ ಮನ್ಸೂರ್ ಇಂದು ನಾಮಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ಅತಾವುಲ್ಲಾ ಜೋಕಟ್ಟೆ, ಮುಲ್ಕಿ ಮೂಡಬಿದರೆ ಕ್ಷೇತ್ರದ ಉಪಾಧ್ಯಕ್ಷ ಇಸ್ಮಾಯೀಲ್ ಎಂಜಿನಿಯರ್, ಬಜ್ಪೆ ಅಲ್ ಹುದಾ ಜುಮಾ ಮಸೀದಿ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಮೋನಾಕ, ಬಜ್ಪೆ ಗ್ರಾಮ ಪಂಚಾಯತ್ ಸದಸ್ಯರಾದ ನಝೀರ್ ಬಜ್ಪೆ, ಎಸ್‌ಡಿಪಿಐ ಬಜ್ಪೆ ತಾಲೂಕು ಸಮಿತಿಯ ಅಧ್ಯಕ್ಷ ಹಸೈನಾರ್, ಸದಸ್ಯರಾದ ಇರ್ಶಾದ್ ಬಜ್ಪೆ, ಮನ್ಸೂರ್‌ಉಪಸ್ಥಿತರಿದ್ದರು.