×
Ad

ಮೂಡುಬಿದಿರೆ : ಜಿ.ಪಂ-ತಾ.ಪಂ ಚುನಾವಣೆ ಪ್ರಚಾರ ಆರಂಭ

Update: 2016-02-06 21:30 IST

ಮೂಡುಬಿದಿರೆ :ನೀತಿ ಸಂಹಿತೆ ಉಲ್ಲಂಘಿಸಿ ಪಂಚಾಯತ್ ವ್ಯಾಪ್ತಿಗಳಲ್ಲಿ ನಡೆಯುತ್ತಿವೆ ಕಾಮಗಾರಿಗಳು ಮೂಡುಬಿದಿರೆ : ಮೂಡುಬಿದಿರೆ ವ್ಯಾಪ್ತಿಯ ಪುತ್ತಿಗೆ ಮತ್ತು ಶಿರ್ತಾಡಿ ಜಿ.ಪಂ ಮತ್ತು ತಾ.ಪಂ ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ನಡೆದಿದ್ದು ಚುನಾವಣೆಯ ಪ್ರಚಾರವೂ ಆರಂಭಗೊಂಡಿದೆ ಇದರ ಜತೆಗೆ ಕೆಲವೊಂದು ಪಂಚಾಯತ್ ವ್ಯಾಪ್ತಿಗಳಲ್ಲಿ ಕಾಮಗಾರಿಗಳು ನಡೆಯುವ ಮೂಲಕ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆಯಾಗುತ್ತಿದ್ದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿದ್ದಾರೆ. 

ಶಿರ್ತಾಡಿ ಜಿ.ಪಂ ಕ್ಷೇತ್ರದ ಪಡುಮಾರ್ನಾಡು ಗ್ರಾ.ಪಂ ವ್ಯಾಪ್ತಿಯ ಮೂಡುಮಾರ್ನಾಡು ಹಾಗೂ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ಕಾಮಗಾರಿಗಳು ರಾಜಾರೋಷವಾಗಿ ನಡೆಯುತ್ತಿದೆ ಹಾಗೂ ಅವ್ಯವಸ್ಥೆಯಲ್ಲಿದ್ದ ಮೋರಿಗಳ ಕಾಮಗಾರಿ ಭರದಿಂದ ಸಾಗುತ್ತಿದೆ ಇದಲ್ಲದೆ ಪಂಚಾಯತ್ ವ್ಯಾಪ್ತಿಗಳಲ್ಲಿ ಸಮಸ್ಯೆಗಳಿದ್ದ ಚರಂಡಿ ಮತ್ತು ರಸ್ತೆಗಳ ದುರಸ್ಥಿ ಕಾಮಗಾರಿಗಳು ಆರಂಭವಾಗಿ ರಾತ್ರಿ ಹರಿದು ಬೆಳಗಾಗುವುದರೊಳಗೆ ಸುಸ್ಥಿತಿಯಲ್ಲಿ ಕಂಡು ಬರುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

  ಪಡುಮಾರ್ನಾಡು-ಡೆಕ್ಕಲ್ ರಸ್ತೆಯ ಕಾಮಗಾರಿಯೂ ಚುನಾವಣಾ ನೀತಿ ಸಂಹಿತಿ ಜಾರಿಯಾದ ನಂತರ ಆರಂಭಗೊಂಡಿದೆ. ಇನ್ನುಳಿದಂತೆ ಚುನಾವಣಾ ನೀತಿ ಸಂಹಿತಿ ಜಾರಿಯಾಗುವ ಮೊದಲು ಆರಂಭಗೊಳ್ಳಬೇಕಾಗಿದ್ದ ಕೆಲವು ಕಾಮಗಾರಿಗಳು ಚುನಾವಣೆಯ ದಿನಾಂಕ ನಿಗದಿಯಾಗಿದ ನಂತರ ಪ್ರಚಾರದ ಸಂದರ್ಭಗಳಲ್ಲಿ ಆರಂಭಗೊಳ್ಳುವ ಮೂಲಕ ಚುನಾವಣೆಯ ಗಿಮಿಕ್‌ನ್ನು ಸೃಷ್ಟಿಸಿರುವುದು ಕಂಡು ಬರುತ್ತಿದೆ.  ಜಿ.ಪಂ ಅಭ್ಯರ್ಥಿಗಳು : ಶಿರ್ತಾಡಿ ಜಿ.ಪಂ ಕ್ಷೇತ್ರದಲ್ಲಿ ಪರಿಶಿಷ್ಟ ಮಹಿಳಾ ಮೀಸಲಾತಿ ಬಂದಿದ್ದು ಕಾಂಗ್ರಸ್‌ನಿಂದ ಸುಮಿತ್ರಾ, ಬಿಜೆಪಿಯಿಂದ ಸುಜಾತ ಹಾಗೂ ಸಿಪಿಐಎಂನಿಂದ ಮೋಹಿನಿ ಅವರು ಕಣಕ್ಕಿಳಿದಿದ್ದಾರೆ. ಪುತ್ತಿಗೆ ಜಿ.ಪಂ ಕ್ಷೇತ್ರವು ಸಾಮಾನ್ಯ ಮೀಸಲಾತಿಯನ್ನು ಹೊಂದಿದ್ದು ಬಿಜೆಪಿಯಿಂದ ಕೆ.ಪಿ.ಸುಚರಿತ ಶೆಟ್ಟಿ, ಜೆಡಿಎಸ್‌ನಿಂದ ದಿವಾಕರ ಶೆಟ್ಟಿ, ಕಾಂಗ್ರೆಸ್‌ನಿಂದ ಏರಿಮಾರು ಚಂದ್ರಹಾಸ ಸನಿಲ್ ಹಾಗೂ ಸಿಪಿಐಎಂನಿಂದ ಯಾದವ ಶೆಟ್ಟಿ ಅವರಿಗೆ ಟಿಕೆಟ್ ನೀಡುವ ಮೂಲಕ ಪಕ್ಷಗಳಲ್ಲಿದ್ದ ಎಲ್ಲಾ ಗೊಂದಲಗಳು ದೂರವಾಗುವ ಮೂಲಕ ಚುನಾವಣೆಯ ಪ್ರಚಾರಕ್ಕೆ ಆರಂಭಿಸಿದ್ದಾರೆ.  ತಾ.ಪಂ ಅಭ್ಯರ್ಥಿಗಳು : ಶಿರ್ತಾಡಿ (ಪ.ಜಾ.ಮ) ಬಿಜೆಪಿಯಿಂದ ನಾಗವೇಣಿ, ಸಿಪಿಐಎಂನಿಂದ ವಿಜಯಾ.

ಬೆಳುವಯಿ (ಪ.ಜಾ) ಕಾಂಗ್ರೆಸ್‌ನಿಂದ ವಿಜಯಾ, ಬಿಜೆಪಿಯಿಂದ ಸಂತೋಷ್, ಸಿಪಿಐಎಂ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಂದರ.  ಪಡುಮಾರ್ನಾಡು (ಸಾಮಾನ್ಯ ) ಕಾಂಗ್ರೆಸ್‌ನಿಂದ ಪ್ರಶಾಂತ್ ಅಮೀನ್, ಬಿಜೆಪಿಯಿಂದ ಸೂರಜ್, ಸಿಪಿಐಎಂ ಬೆಂಬಲಿತ ಪಕ್ಷೇತರ ಅಭ್ಯರ್ಥಿ ನೇಮಿರಾಜ ಬಲ್ಲಾಳ್.  ನೆಲ್ಲಿಕಾರು (ಸಾಮಾನ್ಯ ಮಹಿಳೆ) ಕಾಂಗ್ರೆಸಿನಿಂದ ಪ್ರೇಮಾ, ಬಿಜೆಪಿಯಿಂದ ರೇಖಾ ಸಾಲ್ಯನ್, ಸಿಪಿಐಎಂನಿಂದ ಜಲಜಾ ಶೆಟ್ಟಿ.

ತೆಂಕಮಿಜಾರು (ಸಾಮಾನ್ಯ), ಕಾಂಗ್ರೆಸ್‌ನಿಂದ ಪ್ರಕಾಶ್ ಗೌಡ, ಬಿಜೆಪಿಯಿಂದ ಉಮಾನಾಥ ದೇವಾಡಿಗ, ಜೆಡಿಎಸ್‌ನಿಂದ ಹರಿಪ್ರಸಾದ್ ಶೆಟ್ಟಿ, ಸಿಪಿಐಎಂನಿಂದ ಲಕ್ಷ್ಮೀ.  ಹೊಸಬೆಟ್ಟು (ಸಾ.ಮಹಿಳೆ), ಕಾಂಗ್ರೆಸ್‌ನಿಂದ ರೀಟಾ ಕುಟಿನ್ಹಾ, ಬಿಜೆಪಿಯಿಂದ ಬ್ರಿಜಿತ್ ಕುಟಿನ್ಹಾ, ಜೆಡಿಎಸ್‌ನಿಂದ ಫ್ಲಾವಿಯಾ ಮೆಂಡಿಸ್, ಸಿಪಿಐಎಂನಿಂದ ರಾಧಾ.

ಪಾಲಡ್ಕ (ಪ.ಪಂ ಮಹಿಳೆ), ಕಾಂಗ್ರೆಸ್‌ನಿಂದ ಸವಿತಾ ಟಿ.ಎನ್, ಬಿಜೆಪಿಯಿಂದ ವನಿತಾ ನಾಯ್ಕೆ, ಜೆಡಿಎಸ್‌ನಿಂದ ಗಾಯತ್ರಿ ಹಾಗೂ ಸಿಪಿಐಎಂನಿಂದ ಉಷಾ ಅವರು ತಾ.ಪಂನ ಅಭ್ಯರ್ಥಿಗಳಾಗಿ ಆಯ್ಕೆಯಾಗಿ ಈಗಾಗಲೇ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News