ಬಂಟ್ವಾಳ ತಾಲೂಕು ತಾಪಂ, ಜಿಪಂ ಚುನಾವಣೆ, ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬಂಟ್ವಾಳ ತಾಲೂಕಿನಲ್ಲಿ ಯಾವ್ಯಾವ ಪಕ್ಷಗಳಿಂದ ಯಾರ್ಯಾರು ನಾಮಪತ್ರ ಸಲ್ಲಿಕೆ?
ಬಂಟ್ವಾಳ: ತಾಲೂಕಿನಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ 18, ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ 46 ನಾಮಪತ್ರ ಸಲ್ಲಿಕೆಯಾಗಿದೆ. ರವಿವಾರ ರಜಾದಿನವಾಗಿದ್ದು, ಸೋಮವಾರ ಕೊನೆ ದಿನವಾಗಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಹೆಚ್ಚಾಗುವ ನಿರೀಕ್ಷೆ ಇದೆ. ತಾಲೂಕಿನ ಕೊಳ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಸಾಲೆತ್ತೂರು ಪಂಚಾಯತ್ ಸದಸ್ಯ ವಾಲ್ತಾಜೆ ನಾರಾಯಣ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಹಾಲಿ ಸದಸ್ಯ ಎಂ.ಎಸ್.ಮುಹಮ್ಮದ್‌ರನ್ನು ಅಧಿಕೃತ ಅಭ್ಯರ್ಥಿಯಾಗಿ ಪಕ್ಷ ಪ್ರಕಟಿಸಿದೆ.
ನಾರಾಯಣ ಪೂಜಾರಿ ಈ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದರು. ತನ್ನನ್ನು ಅಭ್ಯರ್ಥಿಯನ್ನಾಗಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಗೆ ಮನವಿ ಕೂಡಾಆ ಸಲ್ಲಿಸಿದ್ದರು. ಆದರೆ, ಪಕ್ಷ ಎಂ.ಎಸ್.ಮುಹಮ್ಮದ್‌ರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಇದರಿಂದ ಅಸಮಾಧಾನಗೊಂಡಿರುವ ನಾರಾಯಣ ಪೂಜಾರಿ ಬಂಡಾಯ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಸಜಿಪಮುನ್ನೂರು ಕ್ಷೇತ್ರದಿಂದ ಚಂದ್ರಪ್ರಕಾಶ್ ಶೆಟ್ಟಿ(ಕಾಂಗ್ರೆಸ್), ಪದ್ಮನಾಭ ಕೊಟ್ಟಾರಿ(ಬಿಜೆಪಿ), ಹಂಝ ನಂದಾವರ, ಇಜಾಝ್ ಅಹಮದ್(ಎಸ್‌ಡಿಪಿಐ), ಶಶಿಕಿರಣ್(ಪಕ್ಷೇತರ), ಶರತ್ ಕುಮಾರ್ (ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ), ಪುದು ಜಿಪಂ ಕ್ಷೇತ್ರದಿಂದ ಎಫ್.ಉಮ್ಮರ್ ಫಾರೂಕ್(ಕಾಂಗ್ರೆಸ್), ರವೀಂದ್ರ ಕಂಬಳಿ(ಬಿಜೆಪಿ), ಸಂಗಬೆಟ್ಟು ಜಿಪಂ ಕ್ಷೇತ್ರಕ್ಕೆ ವಸಂತ ಶೆಟ್ಟಿ ಕೇದಗೆ(ಪಕ್ಷೇತರ), ಹರೀಶ್ ಆಚಾರ್ಯ, ಕುರ್ನಾಡು- ಶಕೀಲ(ಬಿಜೆಪಿ), ಮಾಣಿ- ಧರ್ಮಾವತಿ(ಬಿಜೆಪಿ), ಗೋಳ್ತಮಜಲು- ಯಶೋಧ(ಬಿಜೆಪಿ), ಭಾರತಿ(ಕಾಂಗ್ರೆಸ್), ಪುಣಚ- ವಿಶಾಲಾಕ್ಷಿ(ಕಾಂಗ್ರೆಸ್), ರೇವತಿ(ಬಿಜೆಪಿ) ಸೇರಿದಂತೆ 18 ನಾಮಪತ್ರ ಸಲ್ಲಿಕೆಯಾಗಿದೆ.