×
Ad

ಮಂಗಳೂರು : ಜಿ.ಪಂ.ಗೆ 73, ತಾ.ಪಂ.ಗೆ 175 ನಾಮಪತ್ರ ಸಲ್ಲಿಕೆ

Update: 2016-02-06 21:45 IST

ಮಂಗಳೂರು, ಫೆ. 6: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ ನಡೆಯುವ ಚುನಾವಣೆಗೆ ಇಂದು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ 73 ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ 175 ನಾಮಪತ್ರಗಳು ಸಲ್ಲಿಕೆಯಾಗಿವೆ.

ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಮಂಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ 8, ಬಿಜೆಪಿಯಿಂದ 6, ಸಿಪಿಎಂ 3 ಎಸ್‌ಡಿಪಿಐ 2 ಸಹಿತ ಒಟ್ಟು 19 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬಂಟ್ವಾಳ ಕ್ಷೇತ್ರಕ್ಕೆ ಕಾಂಗ್ರೆಸ್4, ಬಿಜೆಪಿ 8, ಬಿಎಸ್‌ಪಿ 2 ಹಾಗೂ ಪಕ್ಷೇತರರ 4 ಅಭ್ಯರ್ಥಿಗಳ ಸಹಿತ ಒಟ್ಟು 18 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬೆಳ್ತಂಗಡಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ 5, ಬಿಜೆಪಿಯಿಂದ 3, ಜೆಡಿಎಸ್ 2 ಸಹಿತ ಓರ್ವ ಪಕ್ಷೇತರ ಅಭ್ಯರ್ಥಿ ಸಹಿತ 11 ನಾಮಪತ್ರಗಳು ಸಲ್ಲಿಕೆಯಾಗಿವೆ

. ಪುತ್ತೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ 6, ಬಿಜೆಪಿಯಿಂದ 7, ಜನತಾದಳ 1ಎಸ್‌ಡಿಪಿಐ 2 ಹಾಗೂ ಪಕ್ಷೇತರ 2 ಅಭ್ಯರ್ಥಿಗಳು ಸೇರಿ ಒಟ್ಟು 18 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ 3 ಬಿಜೆಪಿಯಿಂದ 2, ಜನತಾದಳದಿಂದ 2 ನಾಮಪತ್ರಗಳು ಸಲ್ಲಿಕೆಯಾಗಿವೆ.

ತಾಲೂಕು ಪಂಚಾಯತ್ ಕ್ಷೇತ್ರಗಳುಮಂಗಳೂರು-

ಕಾಂಗ್ರೆಸ್‌ನಿಂದ 25, ಬಿಜೆಪಿಯಿಂದ 17, ಜೆಡಿಎಸ್‌ನಿಂದ 1, ಸಿಪಿಎಂ 5, ಎಸ್‌ಡಿಪಿಐ 5 ಪಕ್ಷೇತರ 8 ಸಹಿತ 61 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬಂಟ್ವಾಳ-ಕಾಂಗ್ರೆಸ್‌ನಿಂದ 22, ಬಿಜೆಪಿಯಿಂದ 18, ಜೆಡಿಎಸ್ 1, ಬಿಎಸ್‌ಪಿ 2, ಸಿಪಿಎಂ 1, ಪಕ್ಷೇತರ 2 ಸಹಿತ 46 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಬೆಳ್ತಂಗಡಿ-ಕಾಂಗ್ರೆಸ್‌ನಿಂದ 9, ಬಿಜೆಪಿಯಿಂದ 10, ಜೆಡಿಎಸ್ 1, ಪಕ್ಷೇತರ 3 ಅಭ್ಯರ್ಥಿಗಳ ಸಹಿತ 23 ನಾಮಪತ್ರಗಳು ಸಲ್ಲಿಕೆಯಾಗಿವೆ.

ಪುತ್ತೂರು-ಕಾಂಗ್ರೆಸ್‌ನಿಂದ 10, ಬಿಜೆಪಿಯಿಂದ 12, ಜೆಡಿಎಸ್‌ನಿಂದ 1 ಎಸ್‌ಡಿಪಿಐ 4 ಪಕ್ಷೇತರ ಮೂವರು ಅಭ್ಯರ್ಥಿಗಳ ಸಹಿತ 30 ನಾಮಪತ್ರಗಳು ಸಲ್ಲಿಕೆಯಾಗಿವೆ.

ಸುಳ್ಯ-ಕಾಂಗ್ರೆಸ್‌ನಿಂದ 10, ಬಿಜೆಪಿಯಿಂದ 4 ಹಾಗೂ ಪಕ್ಷೇತರ ಒಬ್ಬರು ಅಭ್ಯರ್ಥಿಗಳ ಸಹಿತ 15 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News