ಐಪಿಎಲ್ ಆಟಗಾರರ ಹರಾಜು : ಫ್ಯಾಕ್ಟರಿ ಕಾರ್ಮಿಕನ ಮಗ ನಾಥು ಸಿಂಗ್ ಜಾಕ್‌ಪಾಟ್... !
ಬೆಂಗಳೂರು, ಫೆ.6: ಫ್ಯಾಕ್ಟರಿ ಕಾರ್ಮಿಕನ ಮಗ ಜೈಪುರದ ವೇಗದ ಬೌಲರ್ ನಾಥು ಸಿಂಗ್ ಅವರ ಕನಸು ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ನನಸಾಗಿದೆ.
20ರ ಹರೆಯದ ವೇಗದ ಬೌಲರ್ ನಾಥು ಸಿಂಗ್ 3.20 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ತಂಡ ಸೇರ್ಪಡೆಗೊಂಡಿದ್ದಾರೆ. ನಾಥು ಸಿಂಗ್ ಒಮ್ಮೆಲೆ ಕೋಟ್ಯಾಧೀಶರಾಗಿದ್ದಾರೆ
ತಮಗೆ ದೊರೆತ ಹಣದಲ್ಲಿ ಹೊಸ ಮನೆಯೊಂದನ್ನು ನಿರ್ಮಿಸುವುದಾಗಿ ನಾಥು ಸಿಂಗ್ ತಿಳಿಸಿದ್ದಾರೆ.
ಮುಂಬರುವ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಸೇರುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿ ನಾಥು ಸಿಂಗ್ ತಿಳಿಸಿದ್ದಾರೆ.
ನಾಥು ಸಿಂಗ್ ಐಪಿಎಲ್ ಹರಾಜಿನಲ್ಲಿ ಒಮ್ಮೆಲೆ ಕೋಟ್ಯಾಧೀಶನಾಗಿ ಬದಲಾಗಿದ್ದರೂ, ಅವರ ತಂದೆಗೆ ಮಗನ ಈ ಸಾಧನೆ ಗೊತ್ತಾಗಲಿಲ್ಲ. ಆಂಗ್ಲ ಪತ್ರಿಕೆಯ ಪ್ರತಿನಿಧಿಯೊಬ್ಬರು ನಾಥು ಸಿಂಗ್ ಅವರ ತಂದೆ ಭರತ್ ಸಿಂಗ್‌ರನ್ನು ಸಂಪರ್ಕಿಸಿದಾಗ ‘‘ ನಾನು ಈ ದಿನ ವಯರ್ ಬಂಡಲ್‌ಗಳನ್ನು ಟ್ರಾಲಿಗೆ ಲೋಡ್ ಮಾಡುವುದರಲ್ಲಿ ಮಗ್ನನಾಗಿದ್ದೆ. ಒಬ್ಬರು ಬಂದು ಮಾಹಿತಿ ನೀಡುವ ತನಕ ನನಗೆ ಆ ವಿಚಾರ ಗೊತ್ತಿರಲಿಲ್ಲ ’’ ಎಂದು ಹೇಳಿದರು.
ನಾಥು ಸಿಂಗ್ 6 ರಣಜಿ ಪಂದ್ಯಗಳಲ್ಲಿ 12 ವಿಕೆಟ್ ಸಂಪಾದಿಸಿದ್ದಾರೆ.