×
Ad

ಕೆಐಸಿ ದುಬೈ ಸಮಿತಿಯ ವಾರ್ಷಿಕ ಮಹಾಸಭೆ

Update: 2016-02-06 23:30 IST


   ದುಬೈ, ಫೆ.6: ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆಐಸಿ) ದುಬೈ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ರಾಫೀ ಹೋಟೆಲ್ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಅಶ್ರಫ್ ಖಾನ್ ಮಾಂತೂರ್‌ರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ಸೈಯದ್ ಅಸ್ಗರಲಿ ತಂಙಳ್ ಕೊಲ್ಪೆಉದ್ಘಾಟಿಸಿದರು. ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಶರೀಫ್ ಕಾವು ನೇತೃತ್ವದಲ್ಲಿ 2016-17ನೆ ಸಾಲಿಗೆ ಸಮಿತಿಯ ನೂತನ ಪದಾಧಿಕಾರಿಗನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಸೈಯದ್ ಅಸ್ಗರಲಿ ತಂಙಳ್, ಹಾಜಿ ಮೊಹಿದಿನ್ ಕುಟ್ಟಿ ದಿಬ್ಬ, ಅಬ್ದುಲ್ ಸಲಾಮ್ ಬಪ್ಪಳಿಗೆ, ಶರೀಫ್ ಕಾವು, ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಬೈತಡ್ಕ, ಅಧ್ಯಕ್ಷರಾಗಿ ಅಶ್ರಫ್ ಖಾನ್ ಮಾಂತೂರು, ಕಾರ್ಯಾದ್ಯಕ್ಷರಾಗಿ ಸುಲೈಮಾನ್ ಮೌಲವಿ ಕಲ್ಲೇಗ, ಉಪಾಧ್ಯಕ್ಷರಾಗಿ ರಫೀಕ್ ಆತೂರು, ಅಬ್ಬಾಸ್ ಕೇಕುಡೆ, ರಝಾಕ್ ನೀರ್ಕಜೆ, ಅಶ್ರಫ್ ಸಿಟಿ ಡ್ರೀಮ್, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಗೂನಡ್ಕ, ಕಾರ್ಯದರ್ಶಿಗಳಾಗಿ ಅಶ್ರಫ್ ಪರ್ಲಡ್ಕ, ಹಮೀದ್ ಮಣಿಲ, ಅಶ್ರಫ್ ಬುಳೇರಿಕಟ್ಟೆ, ಕೋಶಾಧಿಕಾರಿಯಾಗಿ ಅಶ್ರಫ್ ಅರ್ತಿಕರೆ, ಸಂಘಟನಾ ಕಾರ್ಯದರ್ಶಿಗಳಾಗಿ ನವಾಝ್ ಬಿ.ಸಿ.ರೋಡು. ಇಲ್ಯಾಸ್ ಕಡಬ, ಅನ್ವರ್ ಮಾಣಿಲ, ರಫೀಕ್ ಮುಕ್ವೆ, ಲೆಕ್ಕ ಪರಿಶೋಧಕರಾಗಿ ರಶೀದ್ ಮುನ್ನಾ, ರಿಫಾಯಿ ಗೂನಡ್ಕ, ಪತ್ರಿಕಾ ಪ್ರತಿನಿಧಿಗಳಾಗಿ ಜಬ್ಬಾರ್ ಬೈತಡ್ಕ, ಜಾಬಿರ್ ಬೆಟ್ಟಂಪಾಡಿ, ಆಸೀಫ್ ಮರೀಲ್, ಅಬ್ದುಲ್ ಅಝೀಝ್ ಸೊರಕೆ, ಸಂಚಾಲಕರಾಗಿ ಉಸ್ಮಾನ್ ಕೆಮ್ಮಿಂಜೆ, ಶರೀಫ್ ಕೊಡ್ನೀರ್, ಅಶ್ರಫ್ ಬಾಂಬಿಲ, ಹಾಜಿ ಸುಲೈಮಾನ್ ಕೊಡಿಪ್ಪಾಡಿ , ಹೈದರ್ ಸಂಪ್ಯ , ಆಸೀಫ್ ಕಂಬಳಬೆಟ್ಟು, ಧಾರ್ಮಿಕ ಸಲಹೆಗಾರರಾಗಿ ಅಬ್ದುಲ್ಲಾ ನಹೀಮಿ, ಅಬ್ದುಲ್ ರಝಾಕ್ ಪಾತೂರು, ಅಶ್ರಫ್ ಅಮ್ಜದಿ, ಸಲಹಾ ಸಮಿತಿ ಸದಸ್ಯರಾಗಿ ನೂರ್ ಮುಹಮ್ಮದ್ ನೀರ್ಕಜೆ, ಬದ್ರುದ್ದೀನ್ ಹೆಂತಾರ್, ಅಬ್ದುಲ್ ಖಾದರ್ ಸಂಪ್ಯ, ಹಾಜಿ ಅಬ್ದುರ್ರಝಾಕ್ ಮಣಿಲ , ಅಬ್ದುರ್ರಝಾಕ್ ಸೋಂಪಾಡಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News