ನಿಡಂಬೂರು ಯುವಕ ಮಂಡಲ ಟ್ರಸ್ಟ್ ಉದ್ಘಾಟನೆ
Update: 2016-02-06 23:34 IST
ಉಡುಪಿ, ಫೆ.6: ಕಡೆಕಾರಿನ ನಿಡಂಬೂರು ಯುವಕ ಮಂಡಲದ ವಾರ್ಷಿಕೋತ್ಸವ ಹಾಗೂ ನೂತನವಾಗಿ ಅಸ್ತಿತ್ವಕ್ಕೆ ಬಂದ ಕಡೆಕಾರು ನಿಡಂಬೂರು ಯುವಕ ಮಂಡಲ ಟ್ರಸ್ಟ್‌ನ ಸಭೆಯು ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು. ಉದ್ಯಮಿ ಎರ್ಮಾಳು ಶಶಿಧರ ಶೆಟ್ಟಿ ಮತ್ತು ಕಡೆಕಾರು ಗ್ರಾಪಂ ಅಧ್ಯಕ್ಷ ಕೆ.ರಘುನಾಥ ಕೋಟ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಕೆ. ಶ್ರೀನಿವಾಸ ಭಟ್ ಕುತ್ಪಾಡಿಯವರನ್ನು ಸನ್ಮಾನಿಸಲಾಯಿತು.
ಯುವಕ ಮಂಡಲದ ಗೌರವಾಧ್ಯಕ್ಷ ಮನೋಹರ ಕೆ. ಸ್ವಾಗತಿಸಿದರು. ಟ್ರಸ್ಟ್‌ನ ಅಧ್ಯಕ್ಷ ಕೆ. ಶ್ರೀನಿವಾಸ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಶೇಖರ ಅಂಚನ್ ಟ್ರಸ್ಟ್‌ನ ಉದ್ದೇಶಗಳನ್ನು ವಿವರಿಸಿದರು. ಕಾರ್ಯದರ್ಶಿ ಮಹೇಶ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ದೀಪಕ್‌ರಾಜ್ ಕಡೆಕಾರು ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ರವೀಂದ್ರ ಕೆ. ಶೆಟ್ಟಿ ವಂದಿಸಿದರು.