×
Ad

ಮಂಗಳೂರು: ಮಿಲ್ಲತ್ ಪ್ರಿ ಸ್ಕೂಲ್ ಕಚೇರಿ ಆರಂಭ

Update: 2016-02-06 23:51 IST


 ಮಂಗಳೂರು, ಫೆ.6: ಮಿಲ್ಲತ್ ಫೌಂಡೇಶನ್ ಫಾರ್ ಎಜುಕೇಶನ್, ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆಯ ಅಂಗ ಸಂಸ್ಥೆಯಾದ ಮಿಲ್ಲತ್ ಫೌಂಡೇಶನ್ ಮಂಗಳೂರಿನ ನಗರದ ಫಳ್ನೀರ್‌ನ ಎಸ್.ಎಲ್. ಮಥಾಯಸ್ ರಸ್ತೆಯ ಬಳಿ ಸ್ಥಾಪಿಸಿದ ಮಿಲ್ಲತ್ ಪ್ರಿ ಸ್ಕೂಲ್ (ಕೆ.ಜಿ,ಕೆಜಿ-1,ಮತ್ತು ಕೆ.ಜಿ-2)ನ ಕಚೇರಿಯನ್ನು ಮಲೇಶಿಯಾದ ಇಸ್ಲಾಮಿಕ್ ವಿಶ್ವ ವಿದ್ಯಾನಿಲಯದ ಪ್ರೊಫೆಸರ್ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ. ಅಬ್ದುಲ್ ಕಲಾಮ್‌ರ ಸಹೋದ್ಯೋಗಿಯಾಗಿದ್ದ ಡಾ.ಎಸ್.ಎ.ಖಾನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ಯುವಕರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕಾದ ಅಗತ್ಯವಿದೆ ಎಂದರುಸಂಸ್ಥೆಯ ನಿರ್ದೇಶಕ ಹಾಗೂ ಖ್ಯಾತ ಮೂಳೆ ತಜ್ಞ ಡಾ.ಎಂ.ವಿ.ಜಲಾಲುದ್ದೀನ್ ಮಾತನಾಡುತ್ತಾ,ದೇಶದ ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ ಎಂದರು. ಮಿಲ್ಲತ್ ಫೌಂಡೇಶನ್ ಫಾರ್ ಎಜುಕೇಶನ್, ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆ ರಾಷ್ಟ್ರಾದ್ಯಂತ ಶಿಕ್ಷಣದೊಂದಿಗೆ ನೈತಿಕ ವೌಲ್ಯ ಬೋಧಿಸುವ 500ಕ್ಕೂ ಅಧಿಕ ಶಾಲೆಗಳನ್ನು ತೆರೆಯುವುದರೊಂದಿಗೆ ಮಹತ್ವದ ಕೊಡುಗೆ ನೀಡಿದೆ. ಸಮಾರಂಭದಲ್ಲಿ ಎಂಎಫ್‌ಎಂನ ಅಧ್ಯಕ್ಷ ಅಬ್ದುಲ್ ಖಾದರ್, ಖಜಾಂಚಿ ರಿಯಾಝ್, ಕಾರ್ಯದರ್ಶಿ ಸಲೀಂ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News