ಬ್ಯಾರಿ ಕ್ಯಾಲೆಂಡರ್, ಬೆಲ್ಕಿರಿ ವಿಶೇಷಾಂಕ ಬಿಡುಗಡೆ
ಮಂಗಳೂರು, ಫೆ.6: ಎಲ್ಲ ಧರ್ಮದ ಹಬ್ಬಗಳು ಮತ್ತು ಸಂಸ್ಕೃತಿಯ ಮಾಹಿತಿಗಳ ಕುರಿತು ಒಂದೇ ಕಡೆ ಸಿಗುವ ಕ್ಯಾಲೆಂಡರ್‌ಗಳು ಒಂದರ್ಥದಲ್ಲಿ ಸರ್ವಧರ್ಮಗಳ ಪ್ರತೀಕವಾಗಿದೆ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾ ಡಮಿ ಪ್ರಕಟಿಸಿದ ಪ್ರಥಮ ಬ್ಯಾರಿ ಕ್ಯಾಲೆಂಡರನ್ನು ಇಂದು ಅತ್ತಾವರದ ಅಕಾಡಮಿ ಕಚೇರಿಯಲ್ಲಿ ಬಿಡುಗಡೆಗೊ ಳಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಪ್ರೊ.ಎ.ವಿ.ನಾವಡ ಮಾತನಾಡಿ, 1854ರಲ್ಲಿ ಬಾಷೆಲ್ ಮಿಷನ್‌ನಿಂದ 30 ವರ್ಷಗಳ ಕಾಲ ಪ್ರಕಟವಾದ ಸೋಲ್ಜ್ ಎಂಬ ಕ್ಯಾಲೆಂಡರ್ ಮಾದರಿ ಕ್ಯಾಲೆಂಡರ್ ಆಗಿದೆ. ಅದು ಕ್ರೈಸ್ತ ಕ್ಯಾಲೆಂಡರ್ ಆಗದೆ ಸರ್ವಧರ್ಮೀಯರ ಹಬ್ಬಗಳನ್ನು, ಕೃಷಿಕರು ಬಿತ್ತನೆ ಮಾಡಬೇಕಾದ ದಿನಗ ಳನ್ನು ಪ್ರಕಟಿಸಿತ್ತು. ಬ್ಯಾರಿ ಕ್ಯಾಲೆಂಡರ್ ಕೂಡ ಎಲ್ಲ ಸಮುದಾಯಗಳ ಮುಖ ವಾಣಿಯಾಗಿ ಪ್ರಕಟಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಬೆಲ್ಕಿರಿ’ ವಿಶೇಷಾಂಕವನ್ನು ಪತ್ರಕರ್ತ ಬಿ.ಎಂ.ಹನೀಫ್ ಬಿಡುಗಡೆಗೊಳಿ ಸಿದರು. ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಾಹಿತಿ ಡಾ.ಯು.ಪಿ. ಉಪಾಧ್ಯಾಯ, ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್, ವುಡ್‌ವರ್ತ್ ಕನ್‌ಸ್ಟ್ರಕ್ಷನ್ ಮಾಲಕ ಎಂ.ಶರೀಫ್, ಬ್ಯಾರಿ ಸಾಹಿತ್ಯ-ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಸಂಪಾದಕ ಮಂಡಳಿಯ ಪ್ರೊ.ಬಿ.ಎಂ.ಇಚ್ಲಂಗೋಡು, ಬಿ.ಎ.ಶಂಸುದ್ದೀನ್ ಮಡಿಕೇರಿ, ಅಬ್ದುರ್ರಹ್ಮಾನ್ ಕುತ್ತೆತ್ತೂರು ಉಪಸ್ಥಿತರಿದ್ದರು.
ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಎಂ.ಇ. ಮುಹಮ್ಮದ್ ಫಿರ್ದೌಸ್ ವಂದಿ ಸಿದರು. ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.