ಮಕ್ಕಳನ್ನು ದುಡಿಸದೆ ಶಿಕ್ಷಣ ನೀಡಿ: ಹಿರಿಯಣ್ಣ
ಮಲ್ಪೆ, ಫೆ.6: ಮಕ್ಕಳನ್ನು ದುಡಿಯಲು ಕಳುಹಿಸದೆ ಅವರಿಗೆ ಶಿಕ್ಷಣ ನೀಡಲು ಹೆತ್ತವರು ಆಸಕ್ತಿ ವಹಿಸಬೇಕು ಎಂದು ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ.ಕಿದಿಯೂರು ಹೇಳಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ಜಿಲ್ಲಾ ಕಾರ್ಮಿಕ ಇಲಾಖೆ ಉಡುಪಿ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಜಂಟಿ ಆಶ್ರಯದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಏರ್ಪಡಿಸಲಾದ ಮಾಹಿತಿ ಕಾರ್ಯಾಗಾರವ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಪನ್ಮೂಲ ವ್ಯಕ್ತಿ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಪಿ.ಜ್ಞಾನೇಶ್ ಮಾಹಿತಿ ನೀಡಿ, ಮಲ್ಪೆಬಂದರಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಮೀನು ಹೆಕ್ಕುವ ಕೆಲಸದಲ್ಲಿ ನಿರತರಾಗಿ ರುವ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಬಾರಿ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಲಾಗಿದೆ. ಶಿಕ್ಷಣ ದೊಂದಿಗೆ ಪುನರ್ವಸತಿಯನ್ನು ಒದಗಿಸ ಲಾಗಿದೆ ಎಂದರು.
ಅತಿಥಿಗಳಾದ ಮಲ್ಪೆ ಮೀನುಗಾರಿಕಾ ಬಂದರು ಯೋಜನೆಯ ಜಂಟಿ ನಿರ್ದೇಶಕ ಕೆ.ಗಣಪತಿ ಭಟ್ ಹಾಗೂ ಸಹಾ ಯಕ ನಿರ್ದೇಶಕ ಕುಮಾರಸ್ವಾಮಿ ಭಾಗ ವಹಿಸಿದ್ದರು. ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ವಾಹನ ಚಾಲ ಕರ ಅಪಘಾತ ಪರಿಹಾರ ವಿಮಾ ಯೋಜ ನೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಯೋಜನಾ ನಿರ್ದೇಶಕ ಪ್ರಭಾಕರ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಜೀವನ್ ಕುಮಾರ್ ವಂದಿಸಿದರು.