‘ಸಿಪಿಎಂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ’
ಬೆಳ್ತಂಗಡಿ, ಫೆ.6: ಸಮಾಜದಲ್ಲಿ ಅನ್ಯಾಯ, ಶೋಷಣೆ, ದೌರ್ಜನ್ಯ ಗಳು ನಡೆದಾಗ ಸಿಪಿಎಂ ಶೋಷಿತರ ಪರವಾಗಿ ನಿಂತು ಚಳವಳಿ ರೂಪಿಸುತ್ತಿದೆ. ರೈತರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್, ಬಿಜೆಪಿ ಪಕ್ಷಗಳು ವಿಧವಿಧವಾದ ಯೋಜನೆಗಳನ್ನು, ಕಾನೂನುಗಳನ್ನು ರೂಪಿಸಿದ್ದರೂ ರೈತರ, ಆದಿವಾಸಿಗಳ ಪರ ನಿಂತಿರುವ ಸಿಪಿಎಂ ಭೂಮಿಯ ಹಕ್ಕಿಗಾಗಿ ನಿರ್ಣಾಯಕ ಹೋರಾಟಗಳನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಆದಿವಾಸಿ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ವಸಂತ ನಡ ಮನವಿ ಮಾಡಿದ್ದಾರೆ.
ಅವರು ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ಅಭ್ಯರ್ಥಿಗಳ ವಿವರ ನೀಡಿ, ಸ್ಪರ್ಧಿಸುವ ಉದ್ದೇಶವನ್ನು ವಿವರಿಸಿದರು. ಸ್ಥಳೀಯಾಡಳಿತದಿಂದ ಮೂಲಭೂತ ಸೌಕರ್ಯ ವಾದ ರಸ್ತೆ, ಕುಡಿಯುವ ನೀರು, ರೈತರಿಗೆ ನೀರಾವರಿ ಸೌಲಭ್ಯ, ಗ್ರಾಮೀಣಾ ಭಿವೃದ್ಧಿ, ರೈತರ ಕೃಷಿಗೆ ಸಹಾಯ, ಬೀಡಿ ಕಾರ್ಮಿಕರ ರಕ್ಷಣೆ, ಸರಕಾರಿ ಶಾಲೆ, ಶಿಕ್ಷಣ ಅಭಿವೃದ್ದಿ ಮಾಡಲು ಸಾಧ್ಯ. ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಹೋರಾಟ ನಡೆಸಿ ನ್ಯಾಯ ನೀಡಲು ಸಾಧ್ಯವಾಗುತ್ತದೆ ಎಂದರು. ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ವಿಠಲ ಮಲೆಕುಡಿಯ, ಸಂಘಟನಾ ಕಾರ್ಯದರ್ಶಿ ಜಯಾನಂದ ಸವಣಾಲು, ಶೇಖರ ಎಲ್. ಸಿಪಿಎಂ ಮುಖಂಡ ಬಿ.ಎಂ. ಭಟ್, ಶಿವಕುಮಾರ್ ಇದ್ದರು.