ಕುಂಡೂರು ಉರೂಸ್: ಸೌಹಾರ್ದ ಸಂಗಮ
ಉಳ್ಳಾಲ: ಎಲ್ಲ ಧರ್ಮದ, ಜಾತಿಯವರೊಡನೆ ಪರಸ್ಪರ ನಂಬಿಕೆ, ವಿಶ್ವಾಸದಿಂದ ಬಾಳಿದರೆ ಬದುಕು ಸಾರ್ಥಕ ಎಂದು ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು.
ಅಂಬ್ಲಮೊಗರು ಕುಂಡೂರು ಹಝ್ರತ್ ಅಸ್ಸೈಯದ್ ಮುಹಮ್ಮದ್ ರಿಫಾಯಿ ಅಲ್-ಬುಖಾರಿ (ಖ)ರವರ 17ನೆ ಉರೂಸ್ ಪ್ರಯುಕ್ತ ನಡೆದ ಸೌಹಾರ್ದ ಸಂಗಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ ಕಾರ್ಯಕ್ರಮದ ಉದ್ಘಾಟಿಸಿದರು. ಹೋಲಿ ಕ್ರಾಸ್‌ಚರ್ಚ್ ಧರ್ಮಗುರು ಫಾ.ಗಿಲ್ಬರ್ಟ್ ಡಿಸೋಜ ಮಾತನಾಡಿದರು. ಮಸೀದಿಯ ಖತೀಬ್ ಎ.ಎಂ ಅಬೂಸ್ವಾಲಿಹ್ ಫೈಝಿ ಪ್ರಾಸ್ತಾವಿಸಿದರು. ಜಿಪ ಸದಸ್ಯ ಎನ್.ಎಸ್ ಕರೀಮ್, ತಾಪ ಸದಸ್ಯ ಮುಸ್ತಫಾ ಹರೇಕಳ, ದೇರಳಕಟ್ಟೆ ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಯ ಅಧ್ಯಕ್ಷ ಮೊಯ್ದಿನ್ ಕುಂಞಿ ಹಾಜಿ ಮರಾಠಿಮೂಲೆ, ದಯಾನಂದ್ ಶೆಟ್ಟಿ, ಸುದರ್ಶನ್ ಶೆಟ್ಟಿ ಪರಿಯಾಳಗುತ್ತು, ಶಾಂತಪ್ಪ ಪೂಜಾರಿ, ರವಿರಾಜ್ ರೈ, ಕುಂಡೂರು ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಶರೀಫ್ ಮತ್ತಿತರರು ಉಪಸ್ಥಿತರಿದರು. ಉದ್ಯಾವರ ಸಾವಿರ ಜಮಾಅತ್ ಮಸೀದಿಯ ಖತೀಬ್ ಅಬ್ದುಲ್ ಸಲಾಂ ಮದನಿ ಮುಖ್ಯ ಪ್ರಭಾಷಣಗೈದರು.
ಮಸೀದಿಯ ಕಾರ್ಯದರ್ಶಿ ಇಬ್ರಾಹೀಂ ಹಾಜಿ ಸ್ವಾಗತಿಸಿದರು. ನುಸ್ರತುಲ್ ಇಸ್ಲಾಂ ಸಂಘದ ಅಧ್ಯಕ್ಷ ರಫೀಕ್ ಎಸ್.ಎಂ ವಂದಿಸಿ, ಇರ್ಫಾನ್ ಮೌಲವಿ ಕರಾಯ ನಿರೂಪಿಸಿದರು.