×
Ad

ಫರಂಗಿಪೇಟೆ: ಚುನಾವಣಾ ಬಹಿಷ್ಕಾರದ ಫ್ಲೆಕ್ಸ್ ತೆರವು

Update: 2016-02-07 00:16 IST

ಫರಂಗಿಪೇಟೆ: ಇಲ್ಲಿನ ಜುಮಾದಿಗುಡ್ಡೆ ನಾಗರಿಕರು ಹಳೆ ರಸ್ತೆಗೆ ಅಳವಡಿಸಿದ್ದ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ತೆರವುಗೊಳಿಸಿತು.

ಈ ವೇಳೆ ಬ್ಯಾನರ್ ತೆರವು ವಿರೋಧಿಸಿ ಜುಮಾದಿಗುಡ್ಡೆ ನಾಗರಿಕರು ಪ್ರತಿಭಟನೆ ನಡೆಸಿದರು. ಹಳೆ ರಸ್ತೆಯಿಂದ ಜುಮಾದಿಗುಡ್ಡೆಗೆ ತೆರಳುವ ದಾರಿ ಸಂಪೂರ್ಣವಾಗಿ ಹದೆಗೆಟ್ಟಿದ್ದು, ಇದರ ದುರಸ್ತಿಗಾಗಿ ಸ್ಥಳೀಯರು ಮಾಡಿದ ಮನವಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಲಾಗಿತ್ತು.

 ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯದ ಕಾರಣ ಬ್ಯಾನರ್ ತೆರವುಗೊಳಿಸುವಂತೆ ನಾಗರಿಕರನ್ನು ಮನವೊಲಿಸಿದರು.

ಆದರೆ, ನಾಗರಿಕರು ಬ್ಯಾನರ್ ತೆರವಿಗೆ ವಿರೋಧಿಸಿದಾಗ ತಹಶೀಲ್ದಾರ್ ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಿದರು. ಈ ಸಂದರ್ಭ ತಹಶೀಲ್ದಾರ್‌ಗೆ ನಾಗರಿಕರು ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಕೆಲಹೊತ್ತು ಉದ್ವಿಗ್ನ ವಾತಾವರಣ ಉಂಟಾಗಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News