ತಲಪಾಡಿಯಲ್ಲಿ ಕರವೇ ಪ್ರತಿಭಟನೆ
Update: 2016-02-07 00:18 IST
ಉಳ್ಳಾಲ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕಾಸರಗೋಡು ಜಿಲ್ಲೆಯ ಗಡಿನಾಡ ಕನ್ನಡಿಗರ ಭಾಷಾ ಸ್ವಾತಂತ್ರ್ಯಕ್ಕೆ ಹಾಗೂ ಸಂವಿಧಾನಬದ್ಧ ಹಕ್ಕನ್ನು ಕೇರಳ ರಾಜ್ಯ ಸರಕಾರ ಕಸಿದುಕೊಳ್ಳುತ್ತಿರುವುದರ ವಿರುದ್ಧ ತಲಪಾಡಿಯಲ್ಲಿ ಶನಿವಾರ ರಸ್ತೆ ತಡೆಯೊಂದಿಗೆ ಪ್ರತಿಭಟನೆ ನಡೆಯಿತು.
ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ನ್ನು ಅರ್ಧ ಗಂಟೆಯ ಕಾಲ ತಡೆದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಅನಿಲ್ ದಾಸ್, ನಝೀರ್ ಹುಸೈನ್ ಬೆಂಗ್ರೆ, ಉಡುಪಿ ಜಿಲ್ಲಾಧ್ಯಕ್ಷ ಎಸ್.ಆರ್.ಲೋಬೊ, ಜಿಲ್ಲಾ ವಕ್ತಾರ ರಹೀಮ್ ಉಚ್ಚಿಲ್,
ಶಿಕ್ಷಕ ಸದಾಶಿವ ರಾವ್, ಸುದೇಶ್ ಶೇಟ್, ಸುಮಸೂದನ ಗೌಡ, ಅಶೋಕ್, ಸುಬ್ಬಯ್ಯ, ಎನ್.ಎ. ಹಂಝ, ಅರುಣ್ ಕುಮಾರ್, ಮೂಸಿರ್ ಅಹ್ಮದ್, ರಾಜೇಶ್, ಜಲೀಲ್, ಮೊಯ್ದಿನ್ ಪಾಲ್ಗೊಂಡಿದ್ದರು.