ನದಿಗೆ ಹಾರಿದ ವ್ಯಕ್ತಿಗಾಗಿ ಹುಡುಕಾಟ
Update: 2016-02-07 00:21 IST
ಕಾಪು: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಉದ್ಯಾವರ ಸೇತುವೆಯಿಂದ ವ್ಯಕ್ತಿಯೊಬ್ಬರು ಇಂದು ರಾತ್ರಿ ನದಿಗೆ ಹಾರಿರುವ ಬಗ್ಗೆ ವರದಿಯಾಗಿದೆ.
ನೀರಿಗೆ ಹಾರಿರುವ ವ್ಯಕ್ತಿಯ ಮೊಬೈಲ್ ಸೇತುವೆ ಮೇಲೆ ಪತ್ತೆಯಾಗಿದ್ದು, ಆ ಮೂಲಕ ಕುಟುಂಬವನ್ನು ಸಂಪರ್ಕಿಸಿದಾಗ ಆ ವ್ಯಕ್ತಿ ಶಿರ್ವದ 60 ವರ್ಷ ವಯಸ್ಸಿನ ಫೆರ್ನಾಂಡಿಸ್ ಎಂದು ತಿಳಿದುಬಂದಿದೆ. ನೀರಿಗೆ ಹಾರಿರುವ ವ್ಯಕ್ತಿಗಾಗಿ ಹುಡುಕಾಟ ಮುಂದುವರಿದಿದ್ದು, ಈವರೆಗೆ ಪತ್ತೆಯಾಗಿಲ್ಲ.
ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ಮೂರು ವರ್ಷಗಳ ಹಿಂದೆ ದುಬೈಯಿಂದ ಊರಿಗೆ ಬಂದು ನೆಲೆಸಿದ್ದರು. ಕುಡಿತದ ಚಟ ಹೊಂದಿದ್ದ ಇವರು ಇಂದು ಬೆಳಗ್ಗೆ 10ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದರು. ವೈಯಕ್ತಿಕ ಕಾರಣದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.