×
Ad

ಅಭಿವೃದ್ಧಿ ಯೋಜನೆಗಳಿಗೆ ಆಡಳಿತಾನುಮತಿ

Update: 2016-02-07 00:22 IST

ಕಾಸರಗೋಡು: ಜಿಲ್ಲೆಯಲ್ಲಿ ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ 32,17,400ರೂ.ನ ಕಾಮಗಾರಿಗಳಿಗೆ ಜಿಲ್ಲಾಧಿಕಾರಿ ಪಿ. ಎಸ್. ಮುಹಮ್ಮದ್ ಸಗೀರ್ ಆಡಳಿತಾನುಮತಿ ನೀಡಿದ್ದಾರೆ.

ಶಾಸಕ ಕೆ. ಕುಂಞಿರಾಮನ್‌ರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಪಿಲಿಕ್ಕೋಡ್ ಗ್ರಾಪಂನ ಎರವಿಲ್-ಕಡುವಕ್ಕಾಡ್ ರಸ್ತೆ ಡಾಮರೀಕರಣಕ್ಕೆ 8 ಲಕ್ಷ ರೂ., ಶಾಸಕ ಪಿ.ಬಿ. ಅಬ್ದುರ್ರಝಾಕ್‌ರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಕುಂಬಳೆ ಗ್ರಾಪಂನ ಎನ್.ಎಚ್. ರೈಲ್ವೆ ಎಟ್ ಬ್ರಿಡ್ಜ್ ಟೆಂಪಲ್ ರಸ್ತೆ ಕಾಂಕ್ರಿಟೀಕರಣಕ್ಕೆ 4,91,000ರೂ., ಪುತ್ತಿಗೆ ಗ್ರಾಪಂನ ಕಲಾನಗರ್-ಬಂದಡ್ಕ ರಸ್ತೆ ಮರು ಡಾಮರೀಕರಣಕ್ಕೆ 5 ಲಕ್ಷ ರೂ., ಮಂಗಲ್ಪಾಡಿ ಗ್ರಾಪಂನ ಅಡ್ಕಕುನ್ನಿಲ್ ಮಸೀದಿ ರಸ್ತೆ ಕಾಂಕ್ರಿಟೀಕರಣಕ್ಕೆ 4 ಲಕ್ಷ ರೂ., ಪೈವಳಿಕೆ ಗ್ರಾಪಂನ ಬಡಿಯಾರು-ತಲ್ತಾಜೆ ರಸ್ತೆ ಡಾಮರೀಕರಣಕ್ಕೆ 3 ಲಕ್ಷ ರೂ.ನ ಆಡಳಿತಾನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News