ಅಕ್ರಮ ಗಾಂಜಾ ದಾಸ್ತಾನು: ಮೂವರ ಬಂಧನ
ಮನೆಗೆ ಅಬಕಾರಿ ಪೊಲೀಸರ ದಾಳಿ
ಮಂಗಳೂರು: ಗಾಂಜಾವನ್ನು ಅಕ್ರಮವಾಗಿ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ನಗರದ ಜಲ್ಲಿಗುಡ್ಡೆಯ ಮನೆಯೊಂದಕ್ಕೆ ಇಂದು ದಾಳಿ ನಡೆಸಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ಗಾಂಜಾವನ್ನು ವಶಪಡಿಸಿ ಮೂವರನ್ನು ಬಂಧಿಸಿದ್ದಾರೆ.
ಚಂದು ಯಾನೆ ವೆಂಕಟೇಶ್ ಜಲ್ಲಿಗುಡ್ಡೆ, ಅವಿನಾಶ್ ಪಡೀಲ್ ಹಾಗೂ ನೌಫಲ್ ಜಲ್ಲಿಗುಡ್ಡೆ ಬಂಧಿತ ಆರೋಪಿಗಳು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ 50 ಗ್ರಾಂ ಗಾಂಜಾದ 10 ಪ್ಯಾಕೆಟ್‌ಗಳು, 200 ಗ್ರಾಂ ತೂಕದ ಒಂದು ಪ್ಯಾಕೆಟ್, 5 ಗ್ರಾಂ.ಗಳ 200 ಪ್ಯಾಕೆಟ್‌ಗಳ ಸಹಿತ ಒಟ್ಟು 800 ಗ್ರಾಂ ಗಾಂಜಾ ಸಹಿತ 5 ಮೊಬೈಲ್‌ಗಳು, ವೇಯಿಂಗ್ ಮೆಶಿನ್, 2 ಕತ್ತಿಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೊತ್ತ 40,000 ರೂ. ಎಂದು ಅಂದಾಜಿಸಲಾಗಿದೆ.
ದ.ಕ. ಜಿಲ್ಲಾ ಅಬಕಾರಿ ಡಿಸಿ ಎಲ್.ಎ.ಮಂಜುನಾಥ ಅವರ ನಿರ್ದೇಶ ನದಂತೆ ಡೆಪ್ಯುಟಿ ಸೂಪರಿಂಟೆಂಡೆಂಟ್ ಡಾ.ಆಶಾಲತಾ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ಕುದ್ರೋಳಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡೆಪ್ಯುಟಿ ಸೂಪರಿಂಟೆಂಡೆಂಟ್ ವಿ.ಚಂದ್ರಪ್ಪ, ಇನ್‌ಸ್ಪೆಕ್ಟರ್ ಅಮರನಾಥ್ ಎಸ್.ಎಸ್.ಭಂಡಾರಿ, ಇನ್‌ಸ್ಪೆಕ್ಟರ್ ಚೇತನ್ ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಚಂದ್ರಹಾಸ ಶೆಟ್ಟಿ ಹಾಗೂ ಸಿಬ್ಬಂದಿ ಜಯಪ್ಪ ಲಮಾಣಿ, ಕೃಷ್ಣ ಆಚಾರ್, ಆನಂದ್ ಗಾಜಿ ಪಾಲ್ಗೊಂಡಿದ್ದರು.