ಯುವತಿಯ ಕೊಲೆ ಪ್ರಕರಣ: ಶಿಕ್ಷೆ ಪ್ರಮಾಣ ಸೋಮವಾರ ಪ್ರಕಟ
Update: 2016-02-07 00:27 IST
ಕಾಸರಗೋಡು: ಕುಂಬಳೆ ಉಳುವಾರಿನ ಫಾತಿಮತ್ ಝುಹುರಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷೆ ಪ್ರಮಾಣ ಸೋಮವಾರ ಬೆಳಗ್ಗೆ ನ್ಯಾಯಾಲಯ ಪ್ರಕಟಿಸಲಿದೆ.
ಶನಿವಾರ ವಿಚಾರಣೆ ತೆಗೆದುಕೊಂಡರೂ ವಾದ-ಪ್ರತಿವಾದದ ಬಳಿಕ ಮುಂದೂಡಲಾಯಿತು. ಪ್ರೇಮಿಸಲು ನಿರಾಕರಿಸಿದ ಕಾರಣಕ್ಕೆ ಮನೆಯೊಳಗೆ ನುಗ್ಗಿ ಕತ್ತು ಕೊಯ್ದು ಕೊಲೆ ನಡೆಸಿದ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಸ್ಪೆಷಲ್ ಪ್ರಾಸಿಕ್ಯೂಶನ್ ಸಿ ಎನ್. ಇಬ್ರಾಹೀಂ, ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ. ಗೋಪಕುಮಾರ್‌ರ ಮುಂದೆ ವಾದಿಸಿದರು.
ಆದರೆ ತನಗೆ ಪತ್ನಿ ಮತ್ತು ಐದು ವರ್ಷದ ಮಗಳಿದ್ದು, 70 ವರ್ಷ ದಾಟಿದ ತಾಯಿಯ ಸಂರಕ್ಷಣೆ ಕೂಡ ತನ್ನದಾಗಿದೆ. ಹಾಗಾಗಿ ಶಿಕ್ಷೆಯಲ್ಲಿ ವಿನಾಯಿತಿ ನೀಡಬೇಕು ಎಂದು ಪ್ರಕರಣದ ಆರೋಪಿ ಉಮ್ಮರ್ ಬ್ಯಾರಿ ನ್ಯಾಯಾಲಯದ ಮುಂದೆ ಮನವಿ ಮಾಡಿದನು. ಶಿಕ್ಷೆ ಆಲಿಸಲು ಝುಹುರಾಳ ತಂದೆ ಅಬೂಬಕರ್ ಮತ್ತು ಸಹೋದರ ಅಝರುದ್ದೀನ್ ನ್ಯಾಯಾಲಯಕ್ಕೆ ಆಗಮಿಸಿದ್ದರು.