ಅಪಘಾತ: ಗಾಯಾಳು ಮಹಿಳೆ ಮೃತ್ಯು
Update: 2016-02-07 00:30 IST
ಕಾಪು: ಪಾಂಗಾಳ ಕೆರೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಚ್ಚಿಲ ಪೊಲ್ಯ ನಿವಾಸಿ ರಝಾಕ್ ಎಂಬವರ ಪತ್ನಿ ಝಾಹಿದಾ(34) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಜ.17ರಂದು ಇವರು ತನ್ನ ತಂದೆ ಹಸನ್ ಇಬ್ರಾಹೀಂರ ದ್ವಿಚಕ್ರ ವಾಹನದಲ್ಲಿ ಎರಡು ವರ್ಷ ಪ್ರಾಯದ ಮಗ ಶಾಹದ್ ಜೊತೆ ಉಚ್ಚಿಲದಿಂದ ಉದ್ಯಾವರದ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದ್ವಿಚಕ್ರ ವಾಹನ ಹತೋಟಿ ತಪ್ಪಿ ರಸ್ತೆ ಬದಿಯ ಕಬ್ಬಿಣದ ಸೂಚನ ಫಲಕಕ್ಕೆ ಢಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಝಾಹಿದಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಮೃತರು ಪತಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.