ನೆಹರೂರನ್ನು ಲೇಖನದಲ್ಲಿ ಟೀಕಿಸಿದ ಸಂಜಯ್ ನಿರುಪಮ್ ಗೆ ಕಾಂಗ್ರೆಸ್ನಿಂದ ಕ್ಷಮೆ

Update: 2016-02-07 07:09 GMT

 ಹೊಸದಿಲ್ಲಿ: ಮುಂಬೈನ ಕಾಂಗ್ರೆಸ್ ಅಧ್ಯಕ್ಷ ಸಂಯ್ ನಿರುಪ್‌ರಿಗೆ ಕಾಂಗ್ರೆಸ್ ದರ್ಶನ್‌ನಲ್ಲಿ ಮುದ್ರಣವಾದ ವಿವಾದಾಸ್ಪದ ಲೇಖನ ಕುರಿತು ಕಾಂಗ್ರೆಸ್ ಪಕ್ಷ  ಕ್ಷಮೆ ನೀಡಿದೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂರನ್ನು ಟೀಕಿಸಿದ್ದಲ್ಲದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ತಂದೆಯನ್ನು ಪ್ಯಾಶಿಸ್ಟ್ ಸೈನಿಕ ಎಂದು ಲೇಖನದಲ್ಲಿ ಜರೆಯಲಾಗಿತ್ತು. ಈ ತಪ್ಪಿಗಾಗಿ ಸಂಪಾದಕ ಸಂಜಯ್ ನಿರುಪಮ್ ಕ್ಷಮೆ ಕೋರಿದ್ದರು.

ಈ ಕ್ಷಮೆಯನ್ನು ಸ್ವೀಕರಿಸಿದ ಕಾಂಗ್ರೆಸ್ ಪಕ್ಷ ಮುಂದೆ ಇಂತಹ ಪ್ರಮಾದಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಕೆಯನ್ನು ನೀಡಿದ್ದಾರೆ. ಪಕ್ಷದ ಮೂಲಕಗಳ ಪ್ರಕಾರ"ಸಂಜಯ್ ನಿರುಪಮ್ ಪಕ್ಷದಪತ್ರಿಕೆ ಕಾಂಗ್ರೆಸ್ ದರ್ಶನದಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ನಿರಾಧಾರ ಮತ್ತು ದುರ್ಭಾವನೆಯ ಲೇಖನವನ್ನು ಬರೆದು ಪ್ರಕಟಿಸಲಾಗಿತ್ತು. ಇದಕ್ಕಾಗಿ ಹೊಣೆಹೊತ್ತು ಸಂಜಯ್ ನಿಶರ್ತ ಕ್ಷಮೆಯಾಚಿಸಿದ್ದರು." ಕಾಂಗ್ರೆಸ್ ಪಕ್ಷದ ಕೇಂದ್ರಿಯ ಶಿಸ್ತು ಸಮಿತಿ ಈಗ ಅವರ ಕ್ಷಮೆಯನ್ನು ಸ್ವೀಕರಿಸಿದ್ದು ಇನ್ನು ಮುಂದೆ ಕಾಂಗ್ರೆಸ್ ದರ್ಶನ್ ಪತ್ರಿಕೆ ಮುದ್ರಣ- ಪ್ರಕಾಶನದ ಸಮಯದಲ್ಲಿ ಎಚ್ಚರಿಕೆ ವಹಿಸುವಂತೆ ಹೇಳಿದೆಯೆಂದು ಸ್ವತಃ ಸಂಜಯ್ ನಿರುಪಮ್ ತಿಳಿಸಿದ್ದಾರೆ.

ಕಾಶ್ಮೀರ ಮತ್ತು ಚೀನಾ ಕುರಿತ ನೆಹರೂ ನೀತಿಯನ್ನು ಕಾಂಗ್ರೆಸ್ ದರ್ಶನದಲ್ಲಿ ಟೀಕಿಸಲಾಗಿತ್ತು. ಕಳೆದ ತಿಂಗಳು ಅದರ ಸಂಪಾದಕ ಸಂಜಯ್ ನಿರುಪಮ್‌ಗೆ ಕಾಂಗ್ರೆಸ್ ಶಿಸ್ತು ಸಮಿತಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಆಂಟನಿ ಅಧ್ಯಕ್ಷತೆಯ ಶಿಸ್ತು ಸಮಿತಿ ಪೂರ್ವಮುಂಬೈಯ ಮಾಜಿ ಲೋಕಸಭಾ ಸದಸ್ಯ ಸಂಜಯ್ ನಿರುಪಮ್‌ರಿಗೆ ಇದೀಗ ಕ್ಷಮೆ ನೀಡಿದೆ.ನಿರುಪಮ್ ಮೊದಲು ಶಿವಸೇನೆಯಲ್ಲಿದ್ದರು. ನಂತರ ಕಾಂಗ್ರೆಸ್ ಸೇರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News