ಉಡುಪಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಅದಾನಿ ಗ್ರೂಪ್ 11,500 ಕೋಟಿ. ರೂ. ಹೂಡಿಕೆ ..!

Update: 2016-02-07 07:17 GMT

ಬೆಂಗಳೂರು, ಫೆ.7: ಅದಾನಿ ಗ್ರೂಪ್ ಉಡುಪಿ ಉಷ್ಣ ವಿದ್ಯುತ್ ಸ್ಥಾವರದ ಸಾಮರ್ಥ್ಯ ವಿಸ್ತರಣೆಗೆ 11,500 ಕೋಟಿ. ರೂ.ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ.
ಅದಾನಿ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಗೌತಮ್ ಅದಾನಿ  ಅವರು ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಇನ್ವೆಸ್ಟ್‌ ಕರ್ನಾಟಕ -2016 )ದಲ್ಲಿ ಈ ವಿಚಾರ ತಿಳಿಸಿದ್ದಾರೆ.
ಉಡುಪಿ ಪವರ‍್ ಕಾರ್ಪೊರೇಶನ್‌ ಲಿಮಿಟೆಡ್ (ಯುಪಿಸಿಎಲ್‌) ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಈಗ ಇರುವ 1,200 ಮೆಗಾ ವ್ಯಾಟ್ ವಿದ್ಯುತ್ ಸಾಮರ್ಥ್ಯವನ್ನು 1,600 ಮೆಗಾ ವ್ಯಾಟ್ ಗೆ ಏರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ವಿದ್ಯತ್‌ ಸ್ಥಾವರದ ಸಾಮರ್ಥ್ಯವನ್ನು ವಿಸ್ತರಿಸುವುದರಿಂದ ಹೆಚ್ಚುವರಿಸುವುದರಿಂದ ಹೆಚ್ಚುವರಿಯಾಗಿ 600ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಗೌತಮ್ ಅದಾನಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ 2ಸಾವಿರ ಕೋಟಿ ರೂ. ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆಯ ತದಡಿ ಬಂದರು ಅಭಿವೃದ್ಧಿಗೆ ಅದಾನಿ ಗ್ರೂಪ್‌ ಮುಂದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News