ಮುಲ್ಕಿ- ಗುತ್ತಕಾಡುವಿನಲ್ಲಿ ಕಾಡುಕೋಣಗಳು ಪ್ರತ್ಯಕ್ಷ!

Update: 2016-02-07 08:40 GMT

ಮುಲ್ಕಿ ಫೆ.7: ಕಾಡುಕೋಣಗಳು ನಾಡು ಪ್ರವೇಶಿಸಿ ಆತಂಕ ಮೂಡಿಸಿದ ಘಟನೆ ಇಲ್ಲಿಗೆ ಸಮೀಪದ ಗುತ್ತಕಾಡು ಎಂಬಲ್ಲಿ ರವಿವಾರ ಬೆಳೆಗ್ಗೆ ನಡೆದಿದೆ.
ಗುತ್ತಕಾಡು ಶಾಲೆಯ ವಠಾರದಲ್ಲಿ ಇಂದು ಬೆಳಗ್ಗೆ ಎರಡು ಕಾಡುಕೋಣಗಳು ಕಾಣಿಸಿಕೊಂಡು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಬೆಳಗ್ಗೆ 8 ಗಂಟೆಯ ಸುಮಾರಿಗೆ ಗುತ್ತಕಾಡು ಶಾಲೆಯ ಬಳಿ ಕಾಣಿಸಿಕೊಂಡ ಕಾಡುಕೋಣಗಳನ್ನು ಗ್ರಾಮಸ್ಥರು ನಾಲ್ಕು ಸುತ್ತಲೂ ಸುತ್ತುವರಿದು ಸ್ಥಳದಿಂದ ಕಡಲದಂತೆ ಮಾಡಿದ್ದು, ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ರೇಂಜ್ ಅರಣ್ಯಾಧಿಕಾರಿ ಪ್ರಕಾಶ್, ಮುಲ್ಕಿ ವಲಯಾಧಿಕಾರಿ ಪರಮೇಶ್ವರ್ ನೇತೃತ್ವದ ತಂಡ ಸ್ಥಳೀಯರ ಸಹಕಾರದೊಂದಿಗೆ ಅವುಗಳನ್ನು ಬಲೆಯ ನೆರವಿನಿಂದ ಹಿಡಿಯಲು ವಿಫಲ ಯತ್ನ ನಡೆಸಿದರು. ಬಳಿಕ ಸಮೀಪದ ಕಾಡಿದೆ ಎರಡೂ ಕಾಡುಕೋಣಗಳನ್ನು ಓಡಿಸಲಾಯಿತು ಎಂದು ತಿಳಿದು ಬಂದಿದೆ.
ಕಳೆದ ಹಲವು ದಿನಗಳಿಂದ ಬೆಳ್ಮಣ್, ಸಂಕಳಕಳಿಯದ ಮಿಷನ್ ಕಾಂಪೌಂಡ್‌ನಲ್ಲಿ ಕಾಣಿಸಿ ಕೊಂಡಿದ್ದ ಕಾಡುಕೋಣಗಳು, ಶನಿವಾರ ಉಳೆಪಾಡಿ ಪ್ರದೇಶದ ಕೋರ್ದಬ್ಬು ದೈವಸ್ಥಾನದ ಬಳಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೆಚ್ಚಿದ ಆತಂಕ: ಕಾಡುಕೋಣ ಹಿಡಿಯದೆ ಸಮೀಪದ ಕಾಡು ಪ್ರದೇಶಕ್ಕೆ ಅಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರು, ಅದು ಮತ್ತೆ ಊರಿಗೆ ಆಗಮಿಸಿ ಬೆಳೆ, ತರಕಾರಿಗಳನ್ನು ನಾಶಪಡಿಸುವ ಭೀತಿಯಿರುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News