×
Ad

ಮೂಡಬಿದ್ರೆ: ಜಾಮಿಉ ಅಲ್-ನೂರು ಮಸೀದಿ ಕಟ್ಟಡ ಶಿಲಾನ್ಯಾಸ

Update: 2016-02-07 16:47 IST

ಮೂಡಬಿದ್ರೆ. ಫೆ, 07: ಶಹೀದ್ ಸಿ.ಎಂ ಅಬ್ದುಲ್ಲಾ ಮುಸ್ಲಿಯಾರ್ ಫೌಂಡೇಶನ್ ಕರ್ನಾಟಕ ಇದರ ಅಧೀನ ಸಂಸ್ಥೆ ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ಕಾಶಿಪಟ್ಣದಲ್ಲಿ ನೂತನವಾಗಿ ನಿರ್ಮಾಣವಾಗುವ ಜಾಮಿಉ ಅಲ್-ನೂರು ಮಸೀದಿ ಕಟ್ಟಡ ಶಿಲಾನ್ಯಾಸವನ್ನು ಪಾಣಕ್ಕಾಡ್‌ಸೈಯದ್ ಸಾಬಿಖಲೀ ಶಿಹಾಬ್ ತಂಙಳ್ ರವಿವಾರ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು.

ರಾಜ್ಯ ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಜಗತ್ತಿನಲ್ಲಿ ಮನುಷ್ಯರು ದಾಯಮಹಿಗಳಾಗಬೇಕಾದರೆ ಮಸೀದಿ. ಮಂದಿರಗಳು ಅಗತ್ಯವಿದೆ. ದೇವರಲ್ಲಿ ಬೇಡುವ ಮೂಲಕ ನಮ್ಮನು ನಾನು ಶುದ್ಧಿಕರಿಸಲು ಸಾಧ್ಯ ಎಂದರು.

ದಾರುನ್ನೂರು ಸಂಸ್ಥೆಯ ಗೌರವಾಧ್ಯಕ್ಷ ದ.ಕ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅರ್ಹರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾರುನ್ನೂರು ಸಂಸ್ಥೆಯ ಅಧ್ಯಕ್ಷ ಹಾಜಿ ಯೇನಪೊಯ ಮುಹಮ್ಮದ್ ಕುಂಞ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಸಂಸ್ಥೆಯ ವಿದೇಶಿ ಕಾರ್ಯಕರ್ತರಿಗೆ ಸನ್ಮಾನಿಸಲಾಯಿತು.

 ಸಮಸ್ತ ಕೇಂದ್ರ ಮುಶಾವರ ಸದಸ್ಯ ಜಬ್ಬಾರ್ ಉಸ್ತಾದ್ ಮಿತ್ತಬೈಲ್, ಶಂಶುದ್ದೀನ್ ಕೆ.ಸಿ ವಳಪಟ್ಟಣ, ಮುಹಮ್ಮದ್ ಬಶೀರ್ ವಳಪಟ್ಟಣ, ದಾರುನ್ನೂರು ಸಂಸ್ಥೆಯ ನಿರ್ದೇಶಕ ಹಾಜಿ ಕೆ.ಎಸ್ ಮುಹಮ್ಮದ್ ಮಸೂದ್, ದ.ಕ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ, ಕಾಶಿಪಟ್ಣ ಗ್ರಾ.ಪ ಅಧ್ಯಕ್ಷ ಸತೀಶ್.ಕೆ, ಮಾಜಿ ಅಧ್ಯಕ್ಷ ರಾಜು ಪೂಜಾರಿ, ದಾವೂದ್ ಹಾಜಿ ಉಜಿರೆ, ದಾರುನ್ನೂರು ಸಂಸ್ಥೆಯ ಯುಎಇ ಘಟಕದ ಅಧ್ಯಕ್ಷ ಹಾಜಿ ಸಲೀಂ ಅಲ್ತಾಫ್ ಪರಂಗಿಪೇಟೆ, ಪ್ರ.ಕಾರ್ಯದರ್ಶಿ ಹಾಜಿ ಬದ್ರುದ್ದೀನ್ ಹೇಂತಾರ್, ಕೋಶಾಧಿಕಾರಿ ಹಾಜಿ ಅಬ್ದುಸ್ಸಲಾಂ ಬಪ್ಪಳಿಗೆ, ಸದಸ್ಯ ಅಬ್ದುಲ್ ನಾಸೀರ್ ಸುರತ್ಕಲ್, ಸೈಯಿದ್ ಫಝಲ್ ತಂಙಳ್ ಮಲಪ್ಪುರಂ, ಸೈಯದ್ ಅಲೀ ತಂಙಳ್ ಕರಾವಳಿ, ದಾರುನ್ನೂರು ಸಂಸ್ಥೆಯ ಮಕ್ಕಾ ವಲಯ ನಿರ್ದೇಶಕ ಹಾಜಿ ಮುಹಮ್ಮದ್ ರಫೀಕ್ ಉಚ್ಚಿಲ್, ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಪ್ಪಿನಂಗಡಿ, ಕಾರ್ಯದರ್ಶಿ ಹಾಜಿ ಅಬ್ದುಸ್ಸಮದ್ ಮಠ, ಕೋಶಾಧಿಕಾರಿ ಹಾಜಿ ಅಬ್ದುಲ್ ಹಮೀದ್ ಕುರುಂಬಳ, ಅಕ್ಬರ್ ಸಿಟಿ ಮ್ಯಾಕ್ಸ್ ಮಕ್ಕಾ, ಯ.ಬಿ ಯುಸೂಫ್ ಉಪಿನಂಗಡಿ, ದಾರುನ್ನೂರು ಸಂಸ್ಥೆಯ ಮದಿನ ವಲಯಾಧ್ಯಕ್ಷ ಹಾಜಿ ಇಬ್ರಾಹಿಂ ಪಾವೂರು, ಕಾರ್ಯದರ್ಶಿ ಅಬ್ದುಲ್ ಖಾದಿರ್ ಬೊಬ್ಬೆಕೇರಿ, ಕೋಶಾಧಿಕಾರಿ ಅಬ್ದುಲ್ ನಾಸೀರ್ ಬಾಂಬಿಲ, ದಾರುನ್ನೂರು ಸಂಸ್ಥೆಯ ಅಲ್-ಜುಬೈಲ್ ವಲಯದ ನಿರ್ದೇಶಕ ಹಾಜಿ ಎ ಮುಹಮ್ಮದ್ ಶರೀಫ್, ಅಲ್-ಖೋಬರ್ ವಲಯದ ಕಾರ್ಯದರ್ಶಿ ಹಾಜಿ ಹುಸೈನಾರ್ ಉಚ್ಚಿಲ, ಉಪ್ಪಿನಂಗಡಿ ವಲಯದ ಅಧ್ಯಕ್ಷ ಹಾಜಿ ಹಸೈನಾರ್ ಬಂಡಾಡಿ, ಕಾರ್ಯದರ್ಶಿ ಹಾಜಿ ಯುನಿಕ್ ಅಬ್ದುಲ್ ರಹ್ಮಾನ್ ಮುಂತಾವರು ಈ ಸಂದರ್ಭ ಉಪಸ್ಥಿತರಿದರು.

ದಾರುನ್ನೂರು ಸಂಸ್ಥೆಯ ಪ್ರ,ಕಾರ್ಯದರ್ಶಿ ಇಬ್ರಾಹಿಂ ಕೋಡಿಜಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಹಮೀದ್ ಹಾಜಿ ವಂದಿಸಿದರು. ಅಬ್ದುಲ್ ಖಾದರ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News