ಕಿನ್ನಿಗೋಳಿ : ವಿಕಲಚೇತನ ಮಕ್ಕಳಿಗೆ ಅರ್ಥಿಕ ಸಹಾಯ
Update: 2016-02-07 18:27 IST
ಕಿನ್ನಿಗೋಳಿ, ಫೆ.7: ಮಹಿಳೆ ಶೈಕ್ಷಣಿಕವಾಗಿ ಅರ್ಥಿಕವಾಗಿ ಮುಂದುವರಿದರೂ ಶೋಷಣೆ, ಕಿರುಕುಳ ನಡೆಯುತ್ತಿದೆ ಈ ಬಗ್ಗೆ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪತ್ರಕರ್ತ ಶರತ್ ಶೆಟ್ಟಿ ಹೇಳಿದರು. ಅವರು ಎಸ್. ಕೋಡಿಯಲ್ಲಿ ಸಂಗಮ ಮಹಿಳಾ ಮಂಡಲ ಹಾಗೂ ಯುವತಿ ಮಂಡಲ ಇದರ 13 ನೇ ವಾರ್ಷಿಕೋತ್ಸವ ಸಮಾರಂಭಲ್ಲಿ ಮಾತನಾಡಿದರು. ಕಿನ್ನಿಗೋಳಿ ಗ್ರಾಮ ಪಂಚಾಯತ್ ಅದ್ಯಕ್ಷೆ ಫಿಲೋಮಿನಾ ಸ್ವಿೇರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಕಲಚೇತನ ಮಕ್ಕಳಿಗೆ ಅರ್ಥಿಕ ಸಹಾಯ.
ನೀಡಲಾಯಿತು. ಹಳೆಯಂಗಡಿ ಮಹಿಳಾ ಮಂಡಲದ ಅದ್ಯಕ್ಷೆ ಜ್ಯೋತಿ ರಾಮಚಂದ್ರ, ಶಿಕ್ಷಕಿ ಮಮತ ಶರತ್ ಶೆಟ್ಟಿ , ಗೌರವಾಧ್ಯಕ್ಷೆ ಶಾಲೆಟ್ ಪಿಂಟೋ ಸಂಘದ ಅದ್ಯಕ್ಷೆ ದಮಯಂತಿ, ಕಾರ್ಯದರ್ಶಿ ಶೋಭಾ ರಾವ್, ಕೋಶಾಧಿಕಾರಿ ಸಂಜೀವಿ ಜೆ. ಶೆಟ್ಟಿ , ಸಂಘಟಕಿ ನಂದಾ ಪಾಯಸ್ ಉಪಸ್ಥಿತಿದ್ದರು. ಶಶಿಸುರೇಶ್ ಸ್ವಾಗತಿಸಿದರು. ಆಶಾಲತಾ ಕೆ ಕಾರ್ಯಕ್ರಮ ನಿರೂಪಿಸಿದರು.