×
Ad

ಸುರತ್ಕಲ್ : ಹುಬ್ಬುನ್ನಬಿ(ಸ) ರಾಷ್ಟ್ರೀಯ ಅಭಿಯಾನ

Update: 2016-02-07 18:33 IST

ಸುರತ್ಕಲ್, ಫೆ.7: ಮೋಸ, ಭೃಷ್ಟಾಚಾರ, ಕುಟುಂಬ ರಾಜಕೀಯಗಳಿಗೆ ಸಮಾಜ ಬಲಿಯಾಗುತ್ತಿದೆ. ಮುಹಮ್ಮದ್ ಫೈಗಂಬರರ ಮಾರ್ಗದರ್ಶನ ಹಾಗೂ ಕಳಿಸಿ ಕೊಟ್ಟ ಅಕ್ರಮ, ಅನ್ಯಾಯ ರಹಿತ, ಜಾತ್ಯಾತೀತ ಪರಿಶುದ್ಧ ರಾಜಕೀಯ ಇಂದಿನ ಬೇಡಿಕೆ ಯಾಗಿದೆ ಎಂದು ಕರ್ನಾಟಕ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‌ನ ಮೌಲಾನಾ ಜಾಫರ್ ಸಾದೀಕ್ ಫೈಝಿ ಅಭಿಪ್ರಾಯಿಸಿದರು.

 ದ.ಕ. ಜಿಲ್ಲಾ ಇಮಾಮ್ ಕೌನ್ಸಿಲ್ ಹುಬ್ಬುನ್ನಬಿ(ಸ) ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ಸುರತ್ಕಲ್‌ನ ಇಡ್ಯಾ ಖಿಲ್‌ರಿಯಾ ಮಸೀದಿ ಬಳಿಯ ಕಡಲ ಕಿನಾರೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

 ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‌ನ ರಾಜ್ಯ ಉಪಾಧ್ಯಕ್ಷ ಸೈಯದ್ ಇಬ್ರಾಹೀಂ ಅಲ್ ಹಾದಿ ತಂಙಳ್ ದುವಾ ಆಶೀರ್ವಚನ ಗೈದರು. ರಾಜ್ಯ ಸಮಿತಿ ಸದಸ್ಯ ಇಸ್ಹಾಕ್ ಬಾಖವಿ ಮಲಪ್ಪುರಂ ಕೇರಳ ಹಾಗೂ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಮುಖ್ಯ ಪ್ರಭಾಷಣ ಗೈದರು.

 ಇಡ್ಯಾ ಖಿಲ್ ರಿಯಾ ಮಸೀದಿ ಇಮಾಮ್ ಹನೀಫ್ ದಾರಿಮಿ, ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಐ. ಯಾಕೂಬ್, ಪ್ರ. ಕಾರ್ಯದರ್ಶಿ ಅಬ್ದುಲ್ ಅಝೀರ್,  ಖಿಲ್‌ರಿಯಾ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಐ. ಬಾಪುಂಞಿ, ಖಿಲ್ರಿಯಾ ಯಂಗ್ ಮೆನ್ಸಸ ಅಧ್ಯಕ್ಷ ಬಿ.ಎಚ್ ಉಸ್ಮಾನ್, ವಕೀಲ ಜೀಶನ್, ಮುಹಮ್ಮದ್ ಸಾವುಕಾರ್ ಮೊದಲದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News