×
Ad

ನೇರಳಕಟ್ಟೆ: ನವೀಕೃತ ಬದ್ರಿಯಾ ಮಸೀದಿ ಉದ್ಘಾಟನೆ

Update: 2016-02-07 18:47 IST

ವಿಟ್ಲ : ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ನವೀಕೃತ ಬದ್ರಿಯಾ ಮಸೀದಿಯ ಉದ್ಘಾಟನಾ ಸಮಾರಂಭವು ಭಾನುವಾರ ನಡೆಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಗೌರವಾಧ್ಯಕ್ಷ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉದ್ಘಾಟಿಸಿದರು.

ಕೊಡಾಜೆ ಖತೀಬ್ ಹಾಜಿ ಪಿ.ಕೆ. ಆದಂ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಅಲ್-ಹಾದಿ ಹಂಝ ತಂಙಳ್ ಪಾಟ್ರಕೋಡಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ ರಾಜ್‌ಕಮಲ್, ಮಾಜಿ ಅಧ್ಯಕ್ಷ ಹಾಜಿ ಬಿ. ಹುಸೈನ್ ಸುಲ್ತಾನ್, ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಆರಂಗಳ, ನೇರಳಕಟ್ಟೆ ಮಸೀದಿ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹಾಜಿ ಎಸ್.ಎಂ. ಮುಹಮ್ಮದ್ ರಫೀಕ್, ಕೊಶಾಧಿಕಾರಿ ಅಬ್ಬಾಸ್ ಎನ್., ಕಾರ್ಯದರ್ಶಿ ಯೂಸುಫ್ ಸಹೀದ್, ಪ್ರಮುಖರಾದ ಯೂಸುಫ್ ಹಾಜಿ ಕೊಡಾಜೆ, ಹಾಜಿ ಮುಹಮ್ಮದ್ ಶಾಫಿ ಮಾಣಿ, ಅಬ್ದುಲ್ ನಾಸಿರ್ ಸಅದಿ ನೇರಳಕಟ್ಟೆ, ಪುತ್ತುಬ್ಬ ಹಾಜಿ ಭಗವಂತಕೋಡಿ, ಅದ್ದ ಹಾಜಿ ಕೊಡಾಜೆ, ಅಹ್ಮದ್ ಖಾನ್ ಕೊಡಾಜೆ, ಉಮ್ಮರ್ ಫೈರೋರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News