ತಲಪಾಡಿ : ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ
ಉಳ್ಳಾಲ. ಫೆ, 07: ಜಾನಪದ ಸಂಸ್ಕೃತಿಗಳನ್ನು ಶಾಶ್ವತವಾಗಿ ನೆಲೆ ನಿಲ್ಲಿಸುವ ಜವ್ಬಾದಾರಿ ಯುವಜನತೆ ಮೇಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ತಲಪಾಡಿ ಪಂಜಾಳದಲ್ಲಿ ಭಾನುವಾರ ಜರಗಿದ ಹೊನಲು ಬೆಳಕಿನ ಸೂರ್ಯ ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯ ಜಾನಪದ ಕಲೆ ಹಾಗೂ ಕ್ರೀಡೆಗಳು ಸೌಹಾರ್ದಯುತ ಕೇಂದ್ರಗಳಾಗಿವೆ. ಕಂಬಳದ ಸಂಘಟಕರಿಂದ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಚಿರಪರಿಚಿತವಾಗಿಸುವ ಕಾರ್ಯ ಆಗಿದೆ, ಆಧುನಿಕ ತಂತ್ರಜ್ಞಾನಗಳು ಬದಲಾದಂತೆ ಕಾನೂನುಗಳ ಬದಲಾವಣೆಗಳು ಆಗುತ್ತಿದೆ. ರಾಜ್ಯ ಸರಕಾರದಿಂದ ಕ್ರೀಡೆಗಳಿಗೆ ನಿರಂತರ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದ್ದು, ಕಂಬಳಕ್ಕೆ ಕಾನೂನು ಅಡ್ಡಿಯಾದರೂ ರಾಜ್ಯ ಸರಕಾರ ಅದನ್ನು ಸಡಿಲುಗೊಳಿಸುವಲ್ಲಿ ಯಶಸ್ವಿಯಾಗಿದೆ. ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ಜಿಲ್ಲೆಯ ಜನತೆ ಮತ್ತು ಸರಕಾರ ಮನೇಕಾ ಗಾಂಧಿ ಮನವೊಲಿಸಿ ಕ್ರೀಡೆಯ ಬಗ್ಗೆ ಸಮಗ್ರ ವರದಿ ನೀಡುವ ಅಗತ್ಯ ಇದೆ ಎಂದರು.