ಹಳೆಯಂಗಡಿ :ಟ್ಯಾಂಕರ್ ಡಿಕ್ಕಿ, ವ್ಯಕ್ತಿ ಗಂಭೀರ
Update: 2016-02-07 21:16 IST
ವ್ಯಕ್ತಯೋರ್ವರಿಗೆ ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಪೇಟೆಯಲ್ಲಿ ನಡೆಸಿದೆ.
ಗಂಭೀರ ಗಾಯಗೊಂಡವರನ್ನು ಪಡುಪಣಂಬೂರು ನಿವಾಸಿ ಶೇಖರ 48 ಎಂದು ತಿಳಿದು ಬಂದಿದ್ದು, ಸಮೀಪದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಹಳೆಯಂಗಡಿ ಬಾರೊಂದರಿಂದ ಊಟ ತೆಗೆದುಕೊಂಡು ಮನೆಗೆ ತೆರಳಲು ರಸ್ತೆ ದಾಟುತ್ತೀದ್ದ ವೇಳೆ ಉಡುಪಿಕಡೆ ಯಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡಸಯಿತೆನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದರು
ಎಂದು ತಿಳಿದು ಬಂದಿದೆ.
ತಕ್ಷಣ ಜಾಣ್ಮೆ ಮೆರೆದ ಹಳೆಯಂಗಡಿ ಪಾರ್ಕ್ ನ ಆಟೋ ಚಾಲಕ ಯೋಗೀಶ್ ತನ್ನ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದರು ಎಂದು ತಿಳಿದು ಬಂದಿದೆ.