ವಿದೇಶಿಯರಿಗೆ ಗೋಮಾಂಸ ಸೇವನೆಗೆ ಅವಕಾಶ: ಹರ್ಯಾಣ ಸರಕಾರದ ಚಿಂತನೆ

Update: 2016-02-07 16:40 GMT

ಹೊಸದಿಲ್ಲಿ,ಫೆ.7: ಹರ್ಯಾಣದಲ್ಲಿ ವಾಸವಿರುವ ವಿದೇಶಿಯರಿಗೆ ತಮ್ಮ ನೆಚ್ಚಿನ ಗೋಮಾಂಸ ಖಾದ್ಯಗಳನ್ನು ಸವಿಯುವ ಯೋಗ ಶೀಘ್ರವೇ ಬರಬಹುದು. ಅವರಿಗಾಗಿ ವಿಶೇಷ ಪರವಾನಿಗೆಗಳನ್ನು ನೀಡಲು ರಾಜ್ಯ ಸರಕಾರವು ಚಿಂತನೆಯನ್ನು ನಡೆಸುತ್ತಿದೆ. ರಾಜ್ಯದಲ್ಲಿ ಗೋಮಾಂಸವನ್ನು ತಿನ್ನಲು ಬಯಸುವ ವಿದೇಶಿಯರಿಗೆ ವಿಶೇಷ ಸಡಿಲಿಕೆಯನ್ನು ಕಲ್ಪಿಸುವ ಬಗ್ಗೆ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಮುಕ್ತ ಮನಸ್ಸು ಹೊಂದಿದ್ದಾರೆ. ವಿದೇಶಿಯರಿಗೆ ಗೋಮಾಂಸ ಸೇವನೆಗೆ ವಿಶೇಷ ಪರವಾನಿಗೆ ನೀಡುವ ಪ್ರಸ್ತಾವನೆ ಸರಕಾರದ ಪರಿಶೀಲನೆಯಲ್ಲಿದೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.


 ಕಳೆದ ವರ್ಷದ ಮಾರ್ಚ್‌ನಲ್ಲಿ ಸರಕಾರವು ಹರ್ಯಾಣ ಗೋವಂಶ ಸಂರಕ್ಷಣ ಮತ್ತು ಗೋಸಂವರ್ಧನ ಶಾಸನವನ್ನು ಅಂಗೀಕರಿಸಿದ್ದು,ಇದರನ್ವಯ ರಾಜ್ಯದಲ್ಲಿ ಗೋಹತ್ಯೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.ವಿದೇಶಿಯರು ಗೋಮಾಂಸವನ್ನು ಸೇವಿಸಲು ಸಾಧ್ಯವಾಗುವಂತೆ ಏನಾದರೂ ಸೌಲಭ್ಯ ಕಲ್ಪಿಸಬೇಕೆಂದಿದ್ದರೆ ನಾವು ಅದಕ್ಕೆ ಸಿದ್ಧರಿದ್ದೇವೆ. ಅದು ವಿಶೇಷ ಪರವಾನಿಗೆಯಾಗಿರಬಹುದು ಮತ್ತು ಪರವಾನಿಗೆ ಇರುವುದಕ್ಕೆ ಕಾನೂನಿನಡಿ ಯಾರೂ ವಿರೋಧಿಸುವುದಿಲ್ಲ ಎಂದು ಖಟ್ಟರ್ ಹೇಳಿದ್ದಾಗಿ ವರದಿಯು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News