×
Ad

ತುಳು ಸಾಂಸ್ಕೃತಿಕ ಕಾರ್ಯಕ್ರಮ ವೈಭವ

Update: 2016-02-07 23:42 IST


ಸುಳ್ಯ, ಫೆ.7: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಗೂನಡ್ಕ ಬೀಜದ ಕಟ್ಟೆಯ ತೆಕ್ಕಿಲ್ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ತುಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕಿಶೋರ್ ಬಿ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ತೀರ್ಥರಾಮ ಯು.ಕೆ. ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕಿ ಅಶ್ವಿನಿ ತುಳುನಾಡಿನ ಸಂಸ್ಕೃತಿ ಹಬ್ಬಗಳ ಆಚರಣೆ, ಮನರಂಜನೆಗಳ ಕುರಿತು ಮಾತನಾಡಿದರು. ಸ್ವಚ್ಛತಾ ಸಮಿತಿಯ ಅಧ್ಯಕ್ಷೆ ಕಾಂತಿ ಬಿ.ಎಸ್., ವಿಮಲಾ ಅರಂತೋಡು, ಮುಖ್ಯ ಶಿಕ್ಷಕ ದಾಮೋದರ ಕೆ., ಅಮೀರ್ ಕುಕ್ಕುಂಬಳ, ಸರೀನ ಅರಂತೋಡು, ತಾರಾ ನಿತ್ಯಾನಂದ,ಬಿಂದು ತೊಡಿಕಾನ,ಬಿಂದು ಕಡೆಪಾಳ ಉಪಸ್ಥಿತರಿದ್ದರು.
ಕೊಯಿನಾಡಿನ ದೀಪಕ್ ಜಾನಪದ ಕಲಾ ಬಳಗದಿಂದ ತುಳು ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿದ ತುಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಹ ಶಿಕ್ಷಕಿ ಸುಜಾತಾ ಸ್ವಾಗತಿಸಿದರು. ವಾಣಿಶ್ರೀ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News