ಕಾಪು: ರಾಷ್ಟ್ರೀಯ ಭಾವೈಕ್ಯ ಪ್ರತಿಜ್ಞಾವಿಧಿ ಬೋಧನೆ
Update: 2016-02-07 23:45 IST
ಕಾಪು, ಫೆ.7: ಜೆಸಿಐ ಮೂಲಕ ಭಾರತದಾದ್ಯಂತ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯ ಅಂಗವಾಗಿ ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಕಾಪು ಜೆಸಿಐನ ಅಧ್ಯಕ್ಷೆ ಸೌಮ್ಯಾ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಅರುಣ್ ಶೆಟ್ಟಿ ಪಾದೂರು, ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ವಿದ್ಯಾಧರ ಪುರಾಣಿಕ್, ಜೇಸಿರೆಟ್ ಅಧ್ಯಕ್ಷೆ ಅರುಣಾ ಐತಾಳ್, ಯುವ ಜೇಸಿ ಅಧ್ಯಕ್ಷ ಧೀರಜ್ ಕುಮಾರ್, ಜೆಸಿಐ ವಲಯ ಉಪಾಧ್ಯಕ್ಷ ರಾಕೇಶ್ ಕುಂಜೂರು ಅತಿಥಿಗಳಾಗಿದ್ದರು.