ಮೂರುಗೋಳಿ: ಎಸ್ಸೆಸ್ಸೆಫ್ ಶಿಬಿರ
Update: 2016-02-07 23:47 IST
ಉಪ್ಪಿನಂಗಡಿ, ಫೆ.7: ಎಸ್ಸೆಸ್ಸೆಫ್ ಮೂರುಗೋಳಿ ಶಾಖೆಯ ವಾರ್ಷಿಕ ಶಿಬಿರವು ಎಮ್.ಯು.ಎಮ್ ಮದ್ರಸ ಹಾಲ್‌ನಲ್ಲಿ ನಡೆಯಿತು. ಶಾಖಾ ಅಧ್ಯಕ್ಷ ಎಮ್.ಎಸ್. ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಶರೀಫ್ ಮದನಿ ಸಭೆ ಉದ್ಘಾಟಿಸಿದರು. ಕಾರ್ಯದರ್ಶಿ ಅಶ್ರಫ್ ಸ್ವಾಗತಿಸಿದರು. ಕಾರ್ಯದರ್ಶಿ ಜಾಫರ್ ಲೆಕ್ಕ ಪತ್ರ ಮಂಡಿಸಿದರು. ನಾಸೀರ್ ವಾರ್ಷಿಕ ವರದಿ ವಾಚಿಸಿದರು. ಡಿವಿಜನ್ ಅಧ್ಯಕ್ಷ ಎನ್.ಎಮ್. ಶರೀಫ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದಾಲಿ ತುರ್ಕಳಿಕೆ, ಸೆಕ್ಟರ್ ನಾಯಕರಾದ ಆರೀಸ್ ಬೇಂಗಿಲ ಮತ್ತು ಮುಸ್ತಫಾ ತರಗತಿ ನಡೆಸಿದರು. ಎಸೆಸೆಲ್ಸಿ ಕ್ಯಾಂಪಸ್ ವಿದ್ಯಾರ್ಥಿಗಳ ಪರೀಕ್ಷಾ ಪತ್ರವನ್ನು ಶಾಖಾ ಕ್ಯಾಂಪಸ್ ಕಾರ್ಯದರ್ಶಿ ಕಲಂದರ್‌ರಿಗೆ ಹಸ್ತಾಂತರಿಸಲಾಯಿತು.ಹಾರೀಸ್ ಬಾರ್ಯ ವಂದಿಸಿದರು.