ಜೂನಿಯರ್ ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ
ಪುಂಜಾಲಕಟ್ಟೆ, ಫೆ.7: ರಝಾನಗರದ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನ ಮಾತೃಸಂಸ್ಥೆ ಹಬೀಬ್ ಅಕಾಡಮಿ ಆಫ್ ಬೇಸಿಕ್ ಎಜುಕೇಶನ್ ವತಿಯಿಂದ ಡಾ. ರಾಜ್‌ಕುಮಾರ್‌ರಂತೆ ಹಾಡುವ ಮೂಲಕ ಮನರಂಜಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಲಿಂಗಪ್ಪರಿಗೆ ಜೂನಿಯರ್ ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಸಂಸ್ಥಾಪಕ ಶೇಖ್ ರಹ್ಮತುಲ್ಲಾ, ನಿವೃತ್ತ ಯೋಧ ಲಕ್ಷ್ಮಣ ಪೂಜಾರಿ ಮತ್ತು ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಶೆಟ್ಟಿ ಮತ್ತು ಖಮರುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಅಬ್ದುಲ್ ಅಝೀಝ್ ಸನ್ಮಾನಿಸಿದರು. ಸಂಸ್ಥೆಯ ಪ್ರಾಂಶುಪಾಲ ಲೋಕಯ್ಯ ಶಿಶಿಲ ಸ್ವಾಗತಿಸಿದರು. ವಿವಿಧ ವಿಭಾಗಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕ ಜಾರ್ಜ್ ಕೆ.ಎಫ್., ಶಿಕ್ಷಕಿಯರಾದ ಫರ್‌ಹೀನ್ ಸುಲ್ತಾನಾ, ಅಕ್ಷಿತಾ, ಪವಿತ್ರಾ.ಡಿ., ವಿಮಲಾ, ಮಮತಾ ಆರ್, ಚೇತನಾ, ಮಧುಶ್ರೀ, ಮಮತಾ, ಅಶ್ರಫುನ್ನೀಸಾ, ಶೇಕ್ ಅಸ್ಮಾ, ನೂರ್‌ಜಹಾನ್, ಶಾಲಿನಿ, ಸರಸ್ವತಿ, ಶೆಹನಾಝ್, ಮತ್ತು ಜೋಕಿಮ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸನಾ, ಅಲ್‌ನಾಝ್ ಕಾರ್ಯಕ್ರಮ ನಿರೂಪಿಸಿದರು.