ಲಾದೆನ್ ಈಗಲೂ ಬಹಾಮಸ್‌ನಲ್ಲಿ ಬದುಕಿದ್ದಾನೆ : ಸ್ನೋಡನ್
ಮಾಸ್ಕೊ: ರಷ್ಯದಲ್ಲಿ ಆಶ್ರಯ ಪಡೆದಿರುವ ಅಮೆರಿಕಾದ ಸಿಐಎಯ ಮಾಜಿ ಅಧಿಕಾರಿ ಎಡ್ವರ್ಡ್ ಸ್ನೇಡನ್ ಅಲ್‌ಖಾಯ್ದೊದ ಚೀಫ್ ಉಸಾಮಾ ಬಿನ್ ಲಾದೆನ್ ಈಗಲು ಜೀವಂತವಾಗಿದ್ದಾನೆ. ಬಹಾಮಸ್‌ನಲ್ಲಿ ಇದ್ದಾನೆ ಎಂಬ ಸ್ಫೋಟಕ ಸುದ್ದಿಯೊಂದನ್ನು ಹೊರಜಗತ್ತಿಗೆ ತೇಲಿ ಬಿಟ್ಟಿದ್ದಾರೆ. ಅವನು ಅಲ್ಲಿ ಸಿಐಎಯ ಕಣ್ಗಾವಲಿನಲ್ಲಿದ್ದಾನೆ. ಅವನಿಗೆ ಪ್ರತಿತಿಂಗಳು ಒಂದು ಲಕ್ಷ ಡಾಲರ್ ನೀಡಲಾಗುತ್ತಿದೆ. ಅಮೆರಿಕ 2011ರಲ್ಲಿ ಪಾಕಿಸ್ತಾನದಲ್ಲಿ ಲಾದೆನ್‌ನ್ನು ಹತ್ಯೆ ಮಾಡಿತ್ತು ಎಂದು ಈವರೆಗೂ ಅಮೆರಿಕ ಬಿಡುಗಡೆಗೊಳಿಸಿದ ಸುದ್ದಿಯನ್ನು ಸ್ನೋಡನ್ ವಂಚನೆ ಮತ್ತು ಸುಳ್ಳು ಎಂದು ವಾದಿಸಿದ್ದಾರೆ. ಅಬಾಟೋಬಾದ್‌ನಲ್ಲಿ ಲಾದೆನ್ ಅಡಗಿದ್ದ ನಿವಾಸಕ್ಕೆ ಕಮಾಂಡೋ ಕಾರ್ಯಾಚರಣೆ ಮೂಲಕ ಕತೆ ಮುಗಿಸಲಾಗಿತ್ತು. ಆದರೆ ಅವನ ಮೃತದೇಹವನ್ನು ಅಮೆರಿಕ ಜಗತ್ತಿನ ಮುಂದೆ ಪ್ರದರ್ಶಿಸಿರಲಿಲ್ಲ. ಸ್ನೋಡನ್ ಪ್ರಕಾರ ಸಿಐಎ ತನ್ನ ಮೋಸ್ಟ್ ವಾಂಟೆಡ್‌ನ್ನು ಹೇಗೆ ಕೊಲ್ಲುತ್ತದೆ? ಅಮೆರಿಕ ಪಾಕಿಸ್ತಾನದೊಂದಿಗೆ ಕೈಮಿಲಾಯಿಸಿ ಲಾಡೆನ್ ಸತ್ತ ನಾಟಕವಾಡಿದೆ. ಈ ಮಾಜಿ ಸಿಐಅ ಅಧಿಕಾರಿಯು ತನ್ನ ಪುಸ್ತಕದಲ್ಲಿ ಲಾಡೆನ್ ಜೀವಂತ ಇರುವ ಕುರಿತು ಸಾಕ್ಷ್ಯಗಳನ್ನು ಮುಂದೆ ಇರಿಸಲಿದ್ದಾರೆ ಎಂದು ಹೇಳಿದ್ದಾರೆ. ಈಗ ಎಲ್ಲೆಡೆ ಹಾಗಿದ್ದರೆ ಅಮೆರಿಕ ಅಬಾಟೋಬಾದ್‌ನಲ್ಲಿಕೊಂದಿದ್ದು ಯಾರನ್ನು ಎಂಬಪ್ರಶ್ನೆ ತಲೆ ತಿನ್ನತೊಡಗಿದೆ.