×
Ad

ಉಳ್ಳಾಲ: ಕಿನ್ಯ ತಲಪಾಡಿ ತಾ.ಪ ಕ್ಷೇತ್ರದಿಂದ, ಹಮೀದ್ ಕಿನ್ಯ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದರು

Update: 2016-02-08 18:41 IST

ಉಳ್ಳಾಲ. ಫೆ.08: ಕಿನ್ಯ ತಲಪಾಡಿ ತಾ.ಪ ಕ್ಷೇತ್ರದಿಂದ ಕಿನ್ಯ ಗ್ರಾ.ಪ ಸದಸ್ಯ ಹಮೀದ್ ಕಿನ್ಯ ಬಂಡಾಯ ಕಾಂಗ್ರೇಸ್ ಅಭ್ಯರ್ಥಿಯಾಗಿ ಸೋಮವಾರ ನಾಮ ಪತ್ರ ಸಲ್ಲಿಸಿದರು.
 1994ರಿಂದ ಕಿನ್ಯ ಗ್ರಾ.ಪ ಸದಸ್ಯರಾಗಿ ಉಪಾಧ್ಯಕ್ಷರಾಗಿ ಅಧ್ಯಕ್ಷರಾಗಿ ಕಾರ್ಯನಿವಹಿಸಿದ ಇವರು 4 ಭಾರಿ ಗ್ರಾ.ಪ ಸದಸ್ಯರಾಗಿ ಗೆಲುವು ಸಾಧಿಸಿದರು. ಮಾಜಿ ಶಾಸಕ ದಿ.ಯು.ಟಿ ಫರಿದ್‌ರವರ ಕಾಲದಲ್ಲೇ ಕಾಂಗ್ರೇಸಿನ ಸಕ್ರೀಯ ಕಾರ್ಯಕರ್ತರಾದ ಇವರು ಕಳೆದ 3 ತಾ.ಪ ಚುನಾವಣಾ ಅವಧಿಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೇಟ್ ಬಯಸಿದರು. ಅದರೆ ಕೊನೆ ಕ್ಷಣದಲ್ಲಿ ಟಿಕೇಟ್ ಕೈ ತಪ್ಪಿದರಿಂದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News