×
Ad

ಬಂಟ್ವಾಳ;ಎಸ್ ಡಿಪಿಐ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣಾ ಅಂಗವಾಗಿ ಕಾರ್ಯಕರ್ತರ ಸಮಾವೇಶ

Update: 2016-02-08 18:56 IST

ಬಂಟ್ವಾಳ; ಪುದು ಮತ್ತು ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣಾ ಕಾರ್ಯಕರ್ತರ ಸಮಾವೇಶವು ಬಿ.ಸಿ.ರೋಡ್ ಅರಫಾ ಹಾಲ್ ನಲ್ಲಿ ನಡೆಯಿತು. ಸಮಾರಂಭದ ಅದ್ಯಕ್ಷ ಸ್ಥಾನವನ್ನು ರಾಜ್ಯ ಚುನಾವಣಾ ಉಸ್ತುವಾರಿ ಅಬ್ದುಲ್ ಲತೀಫ್ ಪುತ್ತೂರು, ಅಥಿತಿಗಳಾಗಿ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವಾಝ್ ಉಳ್ಳಾಲ್, ಅಲ್ಫಾನ್ಸೋ ಫ್ರಾಂಕೋ, ಅಬ್ದುಲ್ ಜಲೀಲ್, ಶಾಹುಲ್ ಎಸ್.ಎಚ್, ಅನ್ವರ್ ಸಾದಾತ್ ಬಜೆತ್ತೂರು, ಮತ್ತು ಚುಣಾಯಿತ ಸದಸ್ಯರು ವೇದಿಕೆಯನ್ನು ಅಲಂಕರಿಸಿದರು.

ಪುದು ಮತ್ತು ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಎಸ್ ಡಿ ಪಿ ಐ ಅಭ್ಯರ್ಥಿಗಳಾದ ರಿಯಾಜ್ ಫರಂಗಿಪೇಟೆ ಮತ್ತು ಹಂಝ ನಂದಾವರ, ತುಂಬೆ ತಾಲೂಕು ಪಂಚಾಯತ್ ಅಭ್ಯರ್ಥಿ ಅಬ್ದುಲ್ ಅಝೀಝ್ ಇವರನ್ನು ಪರಿಚಿಸಲಾಯಿತು.

ಇದೇ ಸಂಧರ್ಭದಲ್ಲಿ ಪುದು ಗ್ರಾಮ ಪಂಚಾಯತಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸುಲೈಮಾನ್ ಉಸ್ತಾದ್, ಸಜಿಪ ಯುವ ಕಾಂಗ್ರೆಸ್ ಅದ್ಯಕ್ಷ ರಾದ ಫಾರೂಕ್ ಇವರನ್ನು ಎಸ್.ಡಿ.ಪಿ.ಐ. ಪಕ್ಷಕ್ಕೆ ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News