×
Ad

ಉಳ್ಳಾಲ : ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶ

Update: 2016-02-08 19:51 IST

ಉಳ್ಳಾಲ,ಫೆ.8: ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಮಾ. 21ರಿಂದ 26ರತನಕ ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ಧರ್ಮನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕಿನ್ಯ ಬೆಳರಿಂಗೆಯ ಭಂಡಾರಮನೆಯಲ್ಲಿ ರವಿವಾರ ನಡೆಯಿತು.
ತಲಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರದಾನ ಅರ್ಚಕ ವೇದಮೂರ್ತಿ ಶ್ರೀ ಬಾಲಕೃಷ್ಣ ಭಟ್ ಪಂಜಾಳ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ತಲಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಾವಿರಾರು ಕೈಗಳು ಕೈಜೋಡಿಸಿದೆ. ನಿತ್ಯವೂ ಸ್ವಯಂ ಸೇವಕರ ದಂಡೇ ಅಲ್ಲಿತ್ತು. ಕೋಟಿ ಕೋಟಿ ರೂ.ಗಳ ಖರ್ಚು ಭರಿಸಲು ಸಾಧ್ಯವಾಯಿತು. ಹತ್ತು ತಿಂಗಳ ದಾಖಲೆ ಅವಧಿಯಲ್ಲಿ ಎಲ್ಲವೂ ನಡೆದಿತ್ತು. ಅದೇ ರೀತಿ ಕಿನ್ಯ ಬೆಳರಿಂಗೆಯಲ್ಲಿ ನಡೆಯುವ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ಧರ್ಮನೇಮ ಸೇರಿದಂತೆ ಶ್ರೀ ಕ್ಷೇತ್ರದ ಎಲ್ಲ ನಿರೀಕ್ಷಿತ ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ಸುಸೂತ್ರವಾಗಲಿ ನೆರವೇರಲಿ. ಆಸ್ತಿಕ ಬಂಧುಗಳಿಗೆ ಶ್ರೀ ಶಕ್ತಿ ಕೃಪೆ ತೋರಲಿ ಎಂದು ಶುಭ ಹಾರೈಸಿದರು.
        
ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಜೀರ್ಣೋದ್ಧಾರ ಸಮಿತಿ ಭಂಡಾರ ಮನೆ ಕಿನ್ಯ, ಬೆಳರಿಂಗೆ ಇದರ ಗೌರವಾಧ್ಯಕ್ಷ ಕೆ.ಟಿ. ಸುವರ್ಣ, ಕಾರ್ಯಾಧ್ಯಕ್ಷ ಕೆ.ಪಿ.ಸುರೇಶ್, ಅಧ್ಯಕ್ಷ ಬಾಬು ಶ್ರೀಶಾಸ್ತ ಕಿನ್ಯ, ಧರ್ಮ ನೇಮ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಕಾರ್ಯಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಮಹಿಳಾ ವಿಭಾಗದ ಗೌರವಾಧ್ಯಕ್ಷರಾದ ಗಿರಿಜಾ ಪರಮೇಶ್ವರ ಬೆರಿಕೆ ಹಾಗೂ ಪ್ರೇಮಲತಾ ಹರಿಶ್ಚಂದ್ರ ಆಚಾರ್ಯ, ಅಧ್ಯಕ್ಷೆ ಮಾಲಿನಿ ನಾರಾಯಣ ಆಚಾರ್ಯ, ಮಂಜನಾಡಿ ಶ್ರೀ ಮಲರಾಯ ಧೂಮಾವತಿ ದೈವಸ್ಥಾನಗಳ ಮೊಕ್ತೇಸರ ರಾಮದಾಸ್ ರೈ, ಕಿನ್ಯ ಗ್ರಾಮ ಪಂಚಾಯತ್ ಸದಸ್ಯ ಮಹಾಬಲ ಪೂಂಜ, ಅಲಂಕಾರಗುಡ್ಡೆ ಮಲರಾಯ ದೈವಸ್ಥಾನದ ಪಾತ್ರಿ ಅಂತ ಪೂಜಾರಿ, ಉಮಾಮಹೇಶ್ವರೀ ದೇವಸ್ಥಾನ ಕಾಪಿಕಾಡ್, ಇದರ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಆನಂದ ಕೆ. ಅಸೈಗೋಳಿ, ರಿಷಿ ಹಾರ್ಡ್‌ವೇರ್‌ನ ಮಾಲಕ ಸತೀಶ್ ಕರ್ಕೇರ, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಸಂಚಾಲಕ ನೀಲಯ್ಯ ಅಗರಿ, ಶ್ರೀ ನಾರಾಯಣ ಗುರು ಯುವವೇದಿಕೆ ಮಂಗಳೂರು ಇದರ ಸಂಚಾಲಕ ಎಂ.ಎಸ್. ಕೋಟ್ಯಾನ್, ಸುಧಾಕರ್, ಮೋನಪ್ಪ ಪೂಜಾರಿ,ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.  ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಟ್ರಸ್ಟಿ ಶ್ರೀ ಬಾಬು ಶ್ರೀ ಶಾಸ್ತಾ ಕಿನ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಕಿನ್ಯ ಹಾಗೂ ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News