ಉಳ್ಳಾಲ: ತಲಪಾಡಿ ಪಂಜಾಳ ಸೂರ್ಯ ಚಂದ್ರ ಜೋಡುಕೆರೆ ಕಂಬಳ
ಉಳ್ಳಾಲ: ತಲಪಾಡಿ ಪಂಜಾಳ ಸೂರ್ಯ ಚಂದ್ರ ಜೋಡುಕೆರೆ ಕಂಬಳ ಇದರ ಸಮಾರೋಪ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು ಇವರ ಅದ್ಯಕ್ಷತೆಯಲ್ಲಿ ನಡೆಯಿತು
ಮಂಗಳೂರು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಎಮ್.ಬಿ. ಪುರಾಣಿಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಂಬಳ ಕೋಣಗಳ ಯಜಮಾನ ಸಾಣೂರು ಸುಂದರ ಕೊಗ್ಗು ಆಚಾರ್ಯ ಅವರನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಆರಣ್ಯ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಸಂದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಎ.ಜೆ. ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ ಮೋಹನ್‌ದಾಸ್ ರೈ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಜಿಲ್ಲಾ ಕಂಬಳ ಸಮಿತಿ ಕೋಶಾಧಿಕಾರಿ ಪಿ. ಆರ್. ಶೆಟ್ಟಿ ಪೊಯ್ಯೋಳು, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ ಸತೀಶ್ ಭಂಡಾರಿ, ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಮಾಡ ಇದರ ಮಾಜಿ ಆಡಳಿತ ಮೊಕ್ತೇಸರ ಜಯಪಾಲ ಶೆಟ್ಟಿ, ಭಂಡಾರಿ ಮಹಾಮಂಡಲ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್, ಜಿಲ್ಲಾ ಕಂಬಳ ಸಮಿತಿ ಪ್ರ. ಕಾರ್ಯದರ್ಶಿ ಎನ್. ವಿಜಯ ಕುಮಾರ್ ಕಂಗಿನಮನೆ, ದಾಸ್ ಪ್ರಮೋಷನ್ ಮತ್ತು ಸುಗ್ಗಿ ಚಿಟ್ ಪಂಡ್ಸ್ ಮಂಗಳೂರು ಆಡಳಿತ ನಿರ್ದೇಶಕ ಅನಿಲ್‌ದಾಸ್, ದ.ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ದೇವದಾಸ್ ಆಳ್ವ, ಉದ್ಯಮಿ ರಾಜೇಶ್ ರೈ ಕೋಟೆಕಾರುಗುತ್ತು, ಕ್ಯಾಪ್ಟನ್ ಮಾಧವ ಶೆಟ್ಟಿ ತಲಪಾಡಿ, ಸಂಜೀವ ಬಗಂಬಿಲ, ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ, ಮನ್ಮಥ ಜೆ. ಶೆಟ್ಟಿ ಅತ್ತೂರು, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಧಾರ್ಮಿಕ ಮುಖಂಡರಾದ ಕೃಷ್ಣ ಶಿವಕೃಪಾ ಕುಂಜತ್ತೂರು, ಸದಸ್ಯರಾದ ಭಾಗ್ಯಲಕ್ಷ್ಮಿ, ಫಯಾರ್, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಬೆಂಗಳೂರು ಇದರ ಕಾರ್ಯದರ್ಶಿ ಸೂಡಿ ಸುರೇಶ್ ಭಾಗವಹಿಸಿದ್ದರು. ಕಂಬಳ ಸಮಿತಿ ಗೌರವಾಧ್ಯಕ್ಷ ಸಚ್ಚಿದಾನಂದ ಭಂಡಾರಿ ತಲಪಾಡಿ ಪಂಜಾಳ, ಮಹಾಪೋಷಕ ನ್ಯಾಯವಾದಿ ರವೀಂದ್ರನಾಥ ರೈ, ಕಾರ್ಯಧ್ಯಕ್ಷ ಟಿ. ರವೀಂದ್ರನಾಥ ಶೆಟ್ಟಿ, ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ ನೆತ್ತಿಲಬಾಳಿಕೆ, ಕೋಶಾಧಿಕಾರಿ ಗಿರೀಶ್ ಆಳ್ವ ಮೋರ್ಲ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ರಕ್ಷಾ ತಲಪಾಡಿ ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಗೋಪಾಲಕೃಷ್ಣ ಮೇಲಾಂಟ ತಲಪಾಡಿ ಬಾವ ವಂದಿಸಿದರು. ಕಂಬಳ ನಿರ್ವಹಣೆ - ಸಂರಕ್ಷಣೆ ಅಕಾಡೆಮಿ ಸಂಚಾಲಕ ಪ್ರೊ ಕೆ. ಗುಣಪಾಲ ಕಡಂಬ ಪ್ರಸ್ತಾವನೆಗೈದರು. ಅಶಿಕ್ ಮಾಡೂರು ಕಾರ್ಯಕ್ರಮ ನಿರ್ವಹಿಸಿದರು. ಪಲಿತಾಂಶ : ಕನೆಹಲಗೆಯಲ್ಲಿ ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ ಚಂದ್ರ ಆಳ್ವ 7.1/2 ಕೋಲು ನಿಶಾನಿಗೆ ನೀರು ಹಾಯಿಸಿದ್ದು ಮಂದಾರ್ತಿ ಶಿರೂರು ನಾರಾಯಣ ನಾಯ್ಕಾ ಅವರು ಕೋಣವನ್ನು ಓಡಿಸಿದ್ದರು.
ದ್ವಿತೀಯ: ಮೋರ್ಲ ಗೀರೀಶ್ ಆಳ್ವ 6.1/2ಕೋಲು ನೀರು ಹಾಯಿಸಿದ್ದು, ಮಂದಾರ್ತಿ ಶಿರೂರು ಗೋಪಾಲ ನಾಯ್ಕಿ ಅವರು ಕೋಣ ಓಡಿಸಿದವರು.
ಹಗ್ಗ ಹಿರಿಯ ಪ್ರಥಮ: ಕಾರ್ಕಳ ಜೀವನ್‌ದಾಸ್ ಅಡ್ಯಂತ್ತಾಯ (ಕೋಣ ಓಡಿಸಿದವರು ಬಂಗಾಡಿ ಮಹಮ್ಮದ್)
ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಎ. (ಕೋಣ ಓಡಿಸಿದವರು ಕೊಳಕೆ ಇರ್ವತ್ತೂರು ಆನಂದ)
ಹಗ್ಗ ಕಿರಿಯ ಪ್ರಥಮ: ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿ’ಸೋಜ (ಕೋಣ ಓಡಿಸಿದವರು ಚಂದ್ರ ಕೆರೆಯಲ್ಲಿ ಪಣಪೀಲು ಪ್ರವೀಣ್ ಕೋಟ್ಯಾನ್)
ದ್ವಿತೀಯ: ಪೆರುವಾಜೆ ನಿರಂಜನ್ ಶೆಟ್ಟಿ ( ಕೋಣ ಓಡಿಸಿದವರು ಬೆಳ್ಳಾರೆ ಪನ್ನೆ ನಾಸೀರ್)
ನೇಗಿಲು ಹಿರಿಯ ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ (ಕೋಣ ಓಡಿಸಿದವರು ಚಂದ್ರಕೆರೆ ಹೊಕ್ಕಾಡಿ ಗೋಳಿ ಹಕ್ಯೆ ಸುರೇಶ್ ಎಂ. ಶೆಟ್ಟಿ )
ದ್ವಿತೀಯ: ಇರುವೈಲು ಪಾಣಿಲ ಬಾಡ ಪೂಜಾರಿ (ಕೋಣ ಓಡಿಸಿದವರು ಕೊಳಕೆ ಇರ್ವತ್ತೂರು ಆನಂದ )
ನೇಗಿಲು ಕಿರಿಯ : ಪ್ರಥಮ : ಬೋಳದಗುತ್ತು ಸತೀಶ್ ಶೆಟ್ಟಿ (ಕೋಣ ಓಡಿಸಿದವರು ಚಂದ್ರಕೆರೆ ಹೊಕ್ಕಾಡಿ ಗೋಳಿ ಹಕ್ಯೆ ಸುರೇಶ್ ಎಂ. ಶೆಟ್ಟಿ ), ದ್ವಿತೀಯ : ಬೋಳದಗುತ್ತು ಸತೀಶ್ ಶೆಟ್ಟಿ (ಕೋಣ ಓಡಿಸಿದವರು ಶ್ರೀಧರ್ ಮರೋಡಿ)
ಅಡ್ಡ ಹಲಗೆ ಪ್ರಥಮ: ಬೋಳಾರ ತ್ರಿಶಾಲ್ ಕೆ. ಪೂಜಾರಿ (ಬಂಗಾಡಿ ಕುದ್ಮಾನ್ ಲೋಕಯ್ಯ ಗೌಡ)
ದ್ವಿತೀಯ: ತೆಕ್ಕಟ್ಟೆ ಮೆಲ್ಗ್‌ಡ್ಡೆ ಮನೆ ಆನಂದ ದೇವಾಡಿಗ (ಕೋಣ ಓಡಿಸಿದವರು ಸೂರ್ಯಕೆರೆ ಮಂದಾರ್ತಿ ಶಿರೂರು ಗೋಪಾಲನಾಯ್ಕೆ)