×
Ad

ಉಳ್ಳಾಲ ನಗರ ಸಭಾ ವಾಣಿಜ್ಯ ಕಟ್ಟಡಕ್ಕೆ ಪೌರಾಯುಕ್ತೆ ರೂಪಾ ಟಿ ಶೆಟ್ಟಿ, ಬಾಡಿಗೆ ಪಾವತಿಸದ ಅಂಗಡಿಗಳಿಗೆ ಬೀಗ ಜಡಿದರು

Update: 2016-02-08 20:28 IST

ಉಳ್ಳಾಲ. ಫೆ, 08: ತೊಕ್ಕೋಟಿನ ಕೇಂದ್ರ ಬಸ್ಸುನಿಲ್ದಾಣದ ಬಳಿ ಇರುವ ಉಳ್ಳಾಲ ನಗರ ಸಭಾ ವಾಣಿಜ್ಯ ಕಟ್ಟಡಕ್ಕೆ ಪೌರಾಯುಕ್ತೆ ರೂಪಾ ಟಿ ಶೆಟ್ಟಿ ಅವರು ಸೋಮವಾರ ದಾಳಿ ನಡೆಸಿ ಒಂದು ಲಕ್ಷಕ್ಕೂ ಅಧಿಕ ಬಾಡಿಗೆ ಪಾವತಿಸದ ಆರು ಅಂಗಡಿಗಳಿಗೆ ಸಿಬ್ಬಂದಿಗಳು ಮತ್ತು ಪೋಲೀಸರ ಸಹಕಾರದಿಂದ ಸೋಮವಾರ ಬೀಗ ಜಡಿದರು .

  ತೊಕ್ಕೊಟ್ಟಿನ ವಾಣಿಜ್ಯ ಕಟ್ಟಡದಲ್ಲಿ ಸುಮಾರು 21 ಅಂಗಡಿಗಳ ಮಾಲೀಕರು ನಗರಸಭೆಗೆ ಮಾಸಿಕ ಬಾಡಿಗೆ ಹಣವನ್ನು ಕಟ್ಟದೆ ಸತಾಯಿಸುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಅನೇಕ ಬಾರಿ ನೋಟೀಸು ನೀಡಿ ಎಚ್ಚರಿಸಿದ್ದರೂ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಖುದ್ದು ಪೌರಾಯುಕ್ತರೇ ಕಾರ್ಯಾಚರಣೆಗಿಳಿದು ಲಕ್ಷಕ್ಕೂ ಮೇಲೆ ಬಾಡಿಗೆ ಬಾಕಿದಾರ ಅಂಗಡಿಗಳಿಗೆ ಸಿಬ್ಬಂದಿಗಳಿಂದ ಬೀಗ ಜಡಿಸಿದ್ದಾರೆ. ನಗರಸಭೆ ಕಟ್ಟಡದಲ್ಲಿ ಸುಮಾರು 48 ಅಂಗಡಿಗಳಿವೆ. ಅದರಲ್ಲಿ ಹಲವು ಅಂಗಡಿ ಮಾಲೀಕರು ನಗರಸಭೆಗೆ 4ವರ್ಷದಿಂದ ಒಟ್ಟು 18 ಲಕ್ಷ ಹಣ ಬಾಕಿಯಿರಿಸಿದ್ದಾರೆ. ಅವರಿಗೆ ಹಲವು ಬಾರಿ ಕಾರ್ಯಾಚರಣೆ ನಡೆಸಿದು ಮೂರು ದಿನಗಳ ಹಿಂದೆ ನಾನು ಖುದ್ದಾಗಿ ನೋಟೀಸು ನೀಡಿದರೂ ಯಾವುದೇ ಪ್ರತಿಸ್ಪಂಧನೆ ಮಾಡದೇ ಬಾಕಿ ಮೊತ್ತವನ್ನು ಪಾವತಿಸಿಲ್ಲ. ಅದಕ್ಕಾಗಿ ಇಂದು ಅಂಗಡಿ ಮಾಲೀಕರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ.

ವಾಣಿಜ್ಯ ಕಟ್ಟಡಗಳಿಂದ ಬರುವ ತೆರಿಗೆ ಬಾಡಿಗೆ ನಗರ ಸಭೆಗೆ ಮುಖ್ಯ ಆದಾಯವಾಗಿದ್ದು ಇದನ್ನು ಅಂಗಡಿ ಮಾಲೀಕರು ಸರಿಯಾಗಿ ಪಾವತಿಸದೆ ಅಭಿವೃದ್ಧಿಗೆ ತೊಡಕಾಗಿದೆ. ಶೀಘ್ರವೇ ಬಾಕಿ ಮೊತ್ತವನ್ನು ಪಾವತಿಸುವಂತೆ  ಮನವಿ ಮಾಡಿದೆವೆ. ಇಲ್ಲವಾದಲ್ಲಿ ಕಠಿಣ ಕ್ರಮಕೈಗೋಳಲಾಗುವುದು ಎಂದು ಪೌರಾಯುಕ್ತೆ ರೂಪಾ.ಟಿ.ಶೆಟ್ಟಿ ವಾರ್ತಾ ಭಾರತಿಗೆ ತಿಳಿಸಿದರು. ನಗರಸಭಾ ವಾಣಿಜ್ಯ ಕಟ್ಟಡದ ಅಂಗಡಿಗಳನ್ನು ಕೆಲ ಪ್ರಭಾವಿಗಳು ಈ ಹಿಂದೆ ಗುಟ್ಟಾಗಿ ನಡೆದ ಟೆಂಡರಿನಲ್ಲಿ ಪಡಕೊಂಡು ವ್ಯಾಪಾರಿಗಳಿಗೆ ಒಳಬಾಡಿಗೆಗೆ ಕೊಟ್ಟು ಅಧಿಕ ಇಳುವರಿ ಪಡೆಯುತ್ತಿದ್ದು ನಗರಸಭೆಗೆ ಮೂಲ ಬಾಡಿಗೆಯನ್ನು ಕಟ್ಟದೆ ವಂಚಿಸಿದ್ದಾರೆ. ನಾನು ಈ ಕಟ್ಟಡದಲ್ಲಿ ಅಂಗಡಿ ಪ್ರಾರಂಭಿಸಿ 4ತಿಂಗಳಿನಿಂದ ಕ್ರಮವಾಗಿ ಬಾಡಿಗೆ ಪಾವತಿಸುತ್ತಾ ಬಂದಿದೆವೆ. ಈ ಬಳ ಬಾಡಿಗೆಯ ವಿಚಾರ ನಮ್ಮಗೆ ಇಂದು ತಿಳಿದು ಬಂದಿದೆ. ನಮ್ಮಗೆ ಹಣ ಪಾವತಿಸಿದ ಯಾವುದೆ ದಾಖಲೆಗಳಾಗಲಿ ರಶೀದಿಯಗಳಿ ನಮ್ಮಗೆ ನಿಡಿಲ್ಲ.
ವ್ಯಾಪಾರಿ ಅಶ್ರಫ್ ಮೇಹಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News