ಮಂಗಳೂರು : ‘ಟೆಂಡರ್ ಫ್ರೆಶ್ ’ ಐಸ್ ಕ್ರೀಂ ಮಳಿಗೆ ಉದ್ಘಾಟನೆ
ಮಂಗಳೂರು,ಫೆ.8: ನೈಸರ್ಗಿಕವಾಗಿ ತಯಾರಿಸಲಾದ ಸ್ವಾದಿಷ್ಟಕರ ಸಸ್ಯಹಾರಿ ಐಸ್‌ಕ್ರೀಂಗಳಿಂದ ಕೂಡಿದ ನೂತನ ಐಸ್‌ಕ್ರೀಂ ಪಾರ್ಲರ್ ‘ಟೆಂಡರ್ ಫ್ರೆಶ್’ ಮಳಿಗೆಯನ್ನು ನಗರದ ಮಲಬಾರ್ ಗೋಲ್ಡ್ ಎದುರಿನ ಅಥೆನಾ ಆಸ್ಪತ್ರೆ ಸಂಕೀರ್ಣದಲ್ಲಿ ಇಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂಬೈ ಮತ್ತು ಗುಜರಾತ್ ನಲ್ಲಿ ಜನಪ್ರಿಯವಾಗಿರುವ ಟೆಂಡರ್‌ಫ್ರೆಶ್ ಐಸ್‌ಕ್ರೀಂ ನಗರದಲ್ಲಿಯೂ ಜನಮೆಚ್ಚಿದ ಐಸ್‌ಕ್ರೀಂ ಪಾರ್ಲರ್ ಆಗಲಿ. ಟೆಂಡರ್‌ಫ್ರೆಶ್ ಐಸ್‌ಕ್ರೀಂ ರಾಸಾಯನಿಕಗಳ ಬಳಕೆಯಲ್ಲಿದೆ ತಯಾರಿಸಲಾಗುತ್ತಿರುವ ಐಸ್‌ಕ್ರೀಂ ಆಗಿರುವುದರಿಂದ ಇದರ ಸ್ವಾದವನ್ನು ಸವಿಯುವ ಒಳ್ಳೆಯ ದಿನಗಳು ನಗರದ ಜನತೆಗೆ ಸಿಗಲಿ . ಸಂಸ್ಥೆಯು ಯಶಸ್ಸನ್ನು ಸಾಧಿಸಲಿ ಎಂದು ಹಾರೈಸಿದರು.
ಶೈಖುನಾ ಅಲ್ಹಾಜ್ ಅಲಿಕುಂಞಿ ಉಸ್ತಾದ್ ಶಿರಿಯಾ ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಜೆ. ಆರ್.ಲೋಬೋ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರಿಗೆ ಬಾಯಲ್ಲಿ ನಿರೂರಿಸುವ ಐಸ್‌ಕ್ರೀಂ ಎಲ್ಲಾ ಸಮಾರಂಭಗಳಿಗೂ ಅಗತ್ಯವಾಗಿ ಬೇಕಾಗಿರುವಂತಹದು. ನಗರ ಜೀವನದಲ್ಲಿ ಒಂದೆಡೆ ಕುಳಿತುಕೊಂಡು ಐಸ್‌ಕ್ರೀಂ ಸವಿಯುವಂತಹ ವಾತವರಣ ಅಗತ್ಯವಿದೆ. ನಗರ ಜೀವನಕ್ಕೆ ಇದು ಪ್ರಾಮುಖ್ಯವಾಗಿದ್ದು , ಅವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಥೆನಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆರ್.ಎಸ್.ಶೆಟ್ಟಿಯಾನ್ ವಹಿಸಿದ್ದರು.
ಸಮಾರಂಭದಲ್ಲಿ ಸಂಸ್ಥೆಯ ಮಾಲಕ ಅಬ್ದುಲ್ ಅಝೀಝ್ ರಹ್ಮಾನ್ , ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಅಥೆನಾ ಸಮೂಹ ಸಂಸ್ಥೆಗಳ ನಿರ್ದೇಶಕಿ ಆಶಾ ಶೆಟ್ಟಿಯಾನ್ , ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಚೇತಕ ಶಶಿಧರ್ ಹೆಗ್ಡೆ, ದ.ಕ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ವಿಶ್ವಾಸ್‌ದಾಸ್ ಬಿಲ್ಡರ್ಸ್ ಮ್ಯಾನೆಜಿಂಗ್ ಡೈರೆಕ್ಟರ್ ಅಬ್ದುರ್ರವೂಫ್ ಪುತ್ತಿಗೆ , ಮನಪಾ ಸದಸ್ಯರಾದ ಅಬ್ದುರ್ರವೂಫ್, ಅಬ್ದುಲ್ ಲತೀಫ್ , ಸುಮಯ್ಯ ಅಶ್ರಫ್, ಟೆಂಡರ್‌ಫ್ರೆಶ್ ಸಂಸ್ಥೆಯ ನಿರ್ದೇಶಕರುಗಳಾದ ವಿಶ್ವನಾಥ ಕೆ.ಶೆಟ್ಟಿ, ಉಷಾ ವಿ.ಶೆಟ್ಟಿ, ಪ್ರಭಾಕರ್ ಶೆಟ್ಟಿ, ಜಗದೀಶ್ ಕಾಮತ್, ಕೂಳೂರು ಮೊಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಸಿದ್ದೀಕ್ ಹಾಜಿ, ಹಸನಬ್ಬ, ಪದ್ಮನಾಭ ನರಿಂಗಾನ, ಅಬ್ದುಲ್ ರಹಮಾನ್, ಎಂ.ಎ.ಮೊಯ್ದಿನ್ ಮೊದಲಾದವರು ಉಪಸ್ಥಿತರಿದ್ದರು.
ವಿಶೇಷತೆ: 2008ರಲ್ಲಿ ಆರಂಭವಾದ ಟೆಂಡರ್‌ಫ್ರೆಶ್ ಐಸ್‌ಕ್ರೀಂ ಮುಂಬೈ , ಗುಜರಾತ್‌ನಲ್ಲಿ ಮನೆಮಾತಾಗಿದೆ. ಯಾವುದೆ ಕೃತಕ ರಾಸಾಯನಿಕ ಬಳಕೆಯಿಲ್ಲದೆ ಸ್ವಾದ ಹಾಗೂ ಬಣ್ಣಗಳಿಂದ ಕೂಡಿರದ ಸಸ್ಯಹಾರಿ ಐಸ್‌ಕ್ರೀಂ ಪಾರ್ಲರ್ ಇದಾಗಿದ್ದು, ಪ್ರತಿ ಅರ್ಧ ಕೆಜಿ ಐಸ್‌ಕ್ರೀಂ ಪ್ಯಾಕ್ ನೊಂದಿಗೆ 250 ಗ್ರಾಂ ಐಸ್‌ಕ್ರೀಂ ಉಚಿತವಾಗಿ ದೊರೆಯಲಿದೆ. ಈ ಕೊಡುಗೆ ಸೀಮಿತವಾಗಿರುತ್ತದೆ.
ತಾಜಾ ಹಣ್ಣುಗಳು, ಒಣ ಹಣ್ಣುಗಳು, ಚಾಕಲೇಟ್‌ಗಳಿಂದ ಕುಡಿದ ಬಗೆಬಗೆಯ ಐಸ್‌ಕ್ರೀಂಗಳ ಜತೆಗೆ ವಿಶೇಷ ಐಸ್‌ಕ್ರೀಂಗಳ ಜತೆಗೆ ವಿಶೇಷ ಐಸ್‌ಕ್ರೀಂಗಳು ಕೂಡ ಪಾರ್ಲರ್‌ನಲ್ಲಿ ಲಭ್ಯವಿರುತ್ತದೆ. ಟೆಂಡರ್‌ಫ್ರೆಶ್ ಮುಂಬೈ ಮಹಾನಗರದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ್ದು 24 ಫ್ಲೇವರ್ ಗಳಲ್ಲಿ ಐಸ್ ಕ್ರೀಂ ತಯಾರಾಗುತ್ತಿದೆ. ಅರ್ಧ ಕೆಜಿ ಮತ್ತು ಅದಕ್ಕಿಂತ ಹೆಚ್ಚಿನ ಅಥವಾ 6 ಕಪ್ ಐಸ್‌ಕ್ರೀಂಗಳನ್ನು ಮನೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆಯೂ ಇದೆ. ಮುಂಬೈ ಮೂಲದ ಟೆಂಡರ್ ಫ್ರೆಶ್ ಐಸ್‌ಕ್ರೀಂನ 15 ಪ್ರಾಂಚೈಸಿ ಘಟಕಗಳಿದ್ದು ಮಂಗಳೂರಿನ ಪ್ರಥಮ ಪಾರ್ಲರ್ ಇದಾಗಿದೆ.