ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯಿಂದ ಬೃಹತ್ ಬುರ್ದಾ ಮಜ್ಲಿಸ್
ಮಂಗಳೂರು, ಫೆ .8: ಸುನ್ನೀ ಸ್ಟೂಡೆಂಟ್ ಫೆಡರೇಶನ್‌ನ ಉಳ್ಳಾಲ ಮೇಲಂಗಡಿ ಶಾಖೆಯ ವತಿಯಿಂದ ಫೆ.2 ರಿಂದ 7 ರವರೆಗೆ ಮೇಲಂಗಡಿ ಉಳ್ಳಾಲ ದರ್ಗಾ ಬಳಿಯ ತಾಜುಲ್ ಉಲಮ ನಗರದಲ್ಲಿ ತಾಜುಲ್ ಉಲಮಾ ಅನುಸ್ಮರಣೆ , ಬೃಹತ್ ಬುರ್ದಾ ಮಜ್ಲಿಸ್, ಮುಹಿಯದ್ದೀನ್ ಮಾಲೆ ಆಲಾಪನೆ ಹಾಗೂ ಮತ ಪ್ರಭಾಷಣ ಉಳ್ಳಾಲ ಖಾಝಿ ಅಸ್ಸಯಿದ್ ಹಾಮಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿಯವರ ದುವಾಶೀರ್ವಚನದೊಂದಿಗೆ ನಡೆಯಿತು.
ಫೆ.2 ರಿಂದ 7 ರವರೆಗೆ ನಡೆದ ಕಾರ್ಯಕ್ರಮದಲ್ಲಿ ಮಳ್‌ಹರ್ ದಅವಾ ಕಾಲೇಜಿನ ಪ್ರೊಫೆಸರ್ ಅನಸ್ ಸಿದ್ದೀಖಿ ಅಲ್ ಕಾಮಿಲ್ ಸಖಾಫಿ ಶಿರಿಯಾ, ಕೇರಳದ ಮಲಪ್ಪುರಂನ ಸಿ.ಕೆ. ರಾಶಿದ್ ಅಲ್ ಬುಖಾರಿ ಉಳ್ಳಾಲ, ದಅವಾ ಕಾಲೇಜ್‌ನ ಪ್ರೊಪೇಸರ್ ಅಬ್ದುಲ್ ಕಲಾಂ ಅಝ್‌ಹರಿ, ವಾಮಂಜೂರು ಖತೀಬ್ ಅಬ್ದುಲ್ ಹಮೀದ್ ಫೈಝಿ ಬೆಂಗರೆ, ಅಬ್ಬಾಸ್ ಮದನಿ ಹೀರೆಬಂಡಾಡಿ, ಸೆಯ್ಯದ್ ಮದನಿ ಅರಬಿಕ್‌ನ ಪ್ರೊಫೆಸರ್ ಅಲ್‌ಹಾಜ್ ಅಬ್ದುರ್ರಶೀದ್ ಮದನಿ ಕ್ರಮವಾಗಿ ಮುಖ್ಯ ಭಾಷಣಗೈದರು.
ಫೆ.4 ರಂದು ಕೇರಳ ಮಲಪ್ಪುರಂನ ಅಶ್ರಫ್ ಪೆರುಮುಗಂ ತಂಡ ಖುತುಬುಝ್ಝಮಾನ್ ಬುರ್ದಾ ಇಖ್‌ವಾನ್ ಇವರಿಂದ ಮುಹ್ಯಿದ್ದೀನ್ ಮಾಲೆ ಆಲಾಪನೆ ನಡೆಯಿತು. ಕೊನೆಯಲ್ಲಿ ನಡೆದ ಅಲ್ ಹಾಫಿಳ್ ಸ್ವಾದಿಖ್ ಅಲಿ ಫಾಳಿಲಿ ಗೂಡಲ್ಲೂರು ಸಿಂಗಾಪುರ ತಂಡ ಇವರಿಂದ ಬೃಹತ್ ಬುರ್ದಾ ಮಜ್ಲಿಸ್ ಆಯೋಜಿಸಲಾಯಿತು. ತಾಜುಲ್ ಉಲಮಾರ ಹಿರಿಯ ಪುತ್ರ ಅಸ್ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಮದನಿ ಅಲ್‌ಬುಖಾರಿ ದುವಾ ನೆರವೇರಿಸಿದರು. ಅಧ್ಯಕ್ಷತೆಯನ್ನು ಉಳ್ಳಾಲ ಸಯ್ಯಿದ್‌ಮದನಿ ದರ್ಗಾದ ಅಧ್ಯಕ್ಷ ಯು.ಎಸ್. ಹಂಝ ಹಾಜಿ ವಹಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಮುಸ್ತಫ ಮದನಿ, ಪೇಟೆ ಮಸೀದಿಯ ಇಮಾಮ್ ಮುಹಮ್ಮದ್ ಹನೀಫ್ ಮದನಿ, ಉಸ್ಮಾನ್ ಸಖಾಫಿ ಪೊಳಲಿ, ಜಲಾಲ್ ಮದನಿ ಕೈಕೊ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಅಬ್ದುಸ್ಸಮದ್ ಅಹ್ಸನಿ, ಪ್ರ. ಕಾರ್ಯದರ್ಶಿ ಸಯ್ಯಿದ್ ಖುಬೈಬ್ ತಂಙಳ್, ಸಲೀಮ್ ಸಅದಿ, ನವಾಝ್ ಸಖಾಫಿ, ಅಬ್ದುಲ್ ಕರೀಂ ಹಾಜಿ, ಯು.ಎ. ಹುಸೈನ್ ಮೋನು, ಮಾಸ್ಟರ್ ಶಿಹಾನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ಎಸ್ಸೆಸ್ಸೆಫ್ ಮೇಲಂಗಡಿ ಅಧ್ಯಕ್ಷ ಹಾಫಿಝ್ ಝೈನುಲ್ ಆಬಿದೀನ್ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಸ್ತಫ ಮಾಸ್ಟರ್ ವಂದಿಸಿದರು.