×
Ad

ಕುಂಡುರು ಉರೂಸ್ ಸಮಾರೂಪ ಸಮಾರಂಭ

Update: 2016-02-08 21:42 IST

ಉಳ್ಳಾಲ. ಫೆ, 08 : ಇತಿಹಾಸ ಪ್ರಸಿದ್ಧ ಕುಂಡೂರು ಜುಮಾ ಮಸೀದಿ ಮದಕ ಅಂಬ್ಲಮೊಗರುನಲ್ಲಿ ಅಂತ್ಯ ಮಿಶ್ರಮಗೊಂಡಿರುವ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ರಿಫಾಯಿ ಅಲ್-ಬುಖಾರಿಯವರ 17ನೇ ಉರೂಸ್ ಯಾನೆ ಝಿಯಾರತ್ ರವಿವಾರ ಸಮಾಪ್ತಿಗೊಂಡಿತು.
ಪಾಣಕ್ಕಾಡ್ ಹಾರಿಸ್‌ಅಲಿ ಶಿಹಾಬ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಊರಿನಲ್ಲಿರುವ ವಲಿಗಳ ಇಂತಹ ದರ್ಗಾಗಳ ನೇರಳಿನಲ್ಲಿ ನಾವು ಬದುಕುತಿದ್ದೆವೆ. ವಲಿಗಳ ಪ್ರಭೆಯಿಂದ ಅದೇಷ್ಟೋ ಅಪಾಯಗಳು ನಮ್ಮ ಊರಿನಿಂದ ದೂರವಾಗಿದೆ. ಅವರ ನೆರಳಿನಲ್ಲಿ ಬದುಕಲು ದೇವರು ಕುರುಣಿಸಲ್ಲಿ ಎಂದು ಪ್ರಾರ್ಥಿಸಿದರು.
ದ.ಕ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಅಬ್ದುಲ್ ಅಝೀರ್ ಅಶ್ರಫಿ ಪಾಣತ್ತೂರು ಮುಖ್ಯ ಪ್ರಭಾಷಣಗೈದರು.
ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮುಹಲೀಂ ಅಬ್ದುಲ್ ಲತೀಫ್ ದಾರಿಮಿ, ಮಜಲ್‌ತೋತ ಖತೀಬ್ ಅಬ್ದುಲ್ ಜಬ್ಬಾರ್ ದಾರಿಮಿ, ಬರ್ವ ಖತೀಬ್ ಅಬ್ದುಲ್ ರಫೀಕ್ ಯಮಾನಿ, ಎಲ್ಯಾರ್ ಖತೀಬ್ ಮುಹಮ್ಮದ್ ಮದನಿ, ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ನಝೀರ್ ಬಜಾಲ್, ಕುಂಡುರು ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಶರೀಫ್, ಕೋಶಾಧಿಕಾರಿ ಅಬೂಬಕ್ಕರ್ ಹಾಜಿ ಸ್ವಾಗತ್, ಪ್ರ.ಕಾರ್ಯದರ್ಶಿ ಇಬ್ರಾಹಿಂ ಹಾಜಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಕುಂಡೂರು ಜುಮಾ ಮಸೀದಿಯ ಖತೀಬ್ ಅಬುಸ್ವಾಲಿ ಫೈಝಿ ಸ್ವಾಗತಿಸಿದರು. ನುಸ್ರತುಲ್ ಇಸ್ಲಾಂ ಸಂಘದ ಅಧ್ಯಕ್ಷ ರಫೀಕ್ ಎಸ್. ಎಂ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News