×
Ad

ಮಂಗಳೂರು :ಮನೆಯ ಹಿಂಬದಿಯ ಬಾಗಿಲು ಮುರಿದು ಕಳ್ಳತನ

Update: 2016-02-08 22:25 IST

ಮಂಗಳೂರು, ಫೆ.8: ನಗರದ ಕಂಕನಾಡಿಯಲ್ಲಿ ನಾರಯಣ ಎಂಬವರ ಮನೆಯಲ್ಲಿ ಹಿಂಬದಿಯ ಬಾಗಿಲು ಮುರಿದು ಕಳ್ಳತನ ನಡೆಸಲಾಗಿದೆ.

   ನಾರಾಯಣ ಅವರು ಆದಿತ್ಯವಾರದಂದು ತಮ್ಮ ಮಗಳ ಮನೆಗೆ ಹೋಗಿದ್ದು ಈ ಸಂದರ್ಭದಲ್ಲಿ ಕಳವುಗೈಯ್ಯಲಾಗಿದೆ. ಮನೆಯಲ್ಲಿದ್ದ 25 ಸಾವಿರ ವೌಲ್ಯದ ರೆಡೋ ವಾಚ್, ಲೇಡಿಸ್ ವಾಚ್, 20 ಸಾವಿರ ವೌಲ್ಯದ ಬೆಳ್ಳಿಯ ತಟ್ಟೆಗಳನ್ನು ಕಳವುಗೈಯ್ಯಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News