×
Ad

ಅನಂತಪುರ ದೇವಾಲಯದ ರಹಸ್ಯ ಕೊಠಡಿ

Update: 2016-02-08 23:19 IST

ಸುಪ್ರೀಂ ಕೋರ್ಟ್ ಮೊರೆ

ತಿರುವನಂತಪುರ,ಫೆ.8:ಕೇರಳದ ತಿರುವನಂತಪುರದ ಅನಂತ ಪದ್ಮನಾಭ ದೇವಸ್ಥಾನದ ನೆಲಮಾಳಿಗೆ­ ಯಲ್ಲಿ ಇನ್ನೂ ತೆರೆಯದೇ ಇರುವ ರಹಸ್ಯ ಕೊಠಡಿಯನ್ನು ತೆರೆಯಲು ಅನುಮತಿ ನೀಡುವಂತೆ ತಜ್ಞರ ಸಮಿತಿಯೊಂದು ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದು, ಇದರೊಂದಿಗೆ ನ್ಯಾಯಾಂಗ ಮತ್ತು ದೇವಸ್ಥಾನದ ಆಡಳಿತ ಉಸ್ತುವಾರಿ ಹೊತ್ತವರ ನಡುವೆ ಇನ್ನೊಂದು ಸುತ್ತಿನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಾಗಿದೆ.
 ಶತಮಾನಗಳಿಂದ ತಿರುವಾಂಕೂರು ರಾಜ ಮನೆತನದ ನಿಯಂತ್ರಣದಲ್ಲಿರುವ ಪದ್ಮನಾಭ ದೇವಸ್ಥಾನದ ನೆಲಮಾಳಿಗೆ­ಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ಐದು ವರ್ಷಗಳ ಹಿಂದೆ ತೆರೆಯ­   ಲಾಗಿತ್ತು.ಈ ಐದು ಕೊಠಡಿಗಳಲ್ಲಿ ಚಿನ್ನ ,ಬೆಳ್ಳಿ ,ಹವಳ,ಪಚ್ಚೆ,ವಜ್ರ ವೈಢೂರ್ಯಗಳ ಸಂಪತ್ತು ಎಲ್ಲರನ್ನು ಬೆರಗು­
 ಗೊಳಿಸಿತ್ತು. ಹಲವು ಲಕ್ಷ ಕೋಟಿ ಮೌಲ್ಯದ ಸಂಪತ್ತು ಇರುವುದು ಪತ್ತೆಯಾಗಿತ್ತು.
ಅನೇಕ ವರ್ಷಗಳಿಂದ ಬೀಗಮುದ್ರೆ ಹಾಕಲಾಗಿದ್ದ ರಹಸ್ಯ ಖಜಾನೆಯನ್ನು ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಈ ಹಿಂದೆ ತೆರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News