ಕನ್ನಡ ಮಾಧ್ಯಮದ ಸೋಲು ಜನಸಾಮಾನ್ಯರ ಸೋಲು
ಪುತ್ತೂರು, ಫೆ.8: ಕನ್ನಡ ಮಾಧ್ಯಮ ಶಾಲೆ ಮೇಲ್ದರ್ಜೆಗೇರಬೇಕು. ಕನ್ನಡ ಶಾಲೆಗಳು ಸೋತರೆ ಹಳ್ಳಿಯ, ಶ್ರೀಸಾಮಾನ್ಯನ, ಮಣ್ಣಿಗೆ ಸೋಲಾದಂತೆ. ದೊಡ್ಡ ಕಂಪೆನಿ, ಶ್ರೀಮಂತರು ಕನ್ನಡ ಮಾಧ್ಯಮ ಶಾಲೆಗಳನ್ನು ಕಟ್ಟುವ ಕಡೆ ಗಮನ ಕೊಡುವಂತೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು.
ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ವತಿಯಿಂದ ನೆಹರೂ ನಗರ ಸುದಾನ ವಸತಿಯುತ ಶಾಲೆಯಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತಿ ಡಾ.ನರೇಂದ್ರ ರೈ ದೇರ್ಲ ಅಭಿನಂದನಾ ಭಾಷಣ ಮಾಡಿದರು. ಶಾಸಕಿ ಶಕುಂತಳಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ಪುಲಸ್ತ್ಯಾ ರೈ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲಡ್ಕ ಪ್ರಭಾಕರ ಭಟ್, ಸುದಾನ ವಸತಿಯುತ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, ಆನಂದಾಶ್ರಮದ ಅಧ್ಯಕ್ಷೆ ಡಾ.ಗೌರಿ ಪೈ, ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ನಾರಾಯಣ, ಉದ್ಯಮಿಗಳಾದ ಮುಳಿಯ ಶ್ಯಾಮ್ ಭಟ್, ಬಲರಾಮ ಆಚಾರ್ಯ, ಡಾ. ಸುಕುಮಾರ ಗೌಡ, ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಲಿಯೊ ನೊರೊನ್ಹ, ಎನ್.ಸುಧಾಕರ ಶೆಟ್ಟಿ, ನಲ್ಕ ಗೋಪಾಲಕೃಷ್ಣ ಆಚಾರ್, ವೇದವ್ಯಾಸ ರಾಮಕುಂಜ, ದಂಬೆಕಾನ ಸದಾಶಿವ ರೈ ಉಪಸ್ಥಿತರಿದ್ದರು. ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ಅಧ್ಯಕ್ಷ ಸವಣೂರು ಸೀತಾರಾಮ ರೈ ಸ್ವಾಗತಿಸಿದರು. ಕೋಶಾಧಿಕಾರಿ ಐತ್ತಪ್ಪನಾಯ್ಕ ವಂದಿಸಿದರು. ಕಾರ್ಯಾಧ್ಯಕ್ಷ ಪುರಂದರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.