×
Ad

ಮಂಜೇಶ್ವರ: ಸ್ವಲಾತ್ ವಾರ್ಷಿಕ ಸಮಾಪ್ತಿ,

Update: 2016-02-08 23:34 IST


ಕುಂಜತ್ತೂರು, ಫೆ.8: ಮಂಜೇಶ್ವರದ ಒಳಪೇಟೆಯಲ್ಲಿರುವ ಮೈಮೂನ್ ಜುಮಾ ಮಸೀದಿ ಹಾಗೂ ಮದ್ರಸ ಕಮಿಟಿಯ ವತಿಯಿಂದ ನಡೆದ ಸ್ವಲಾತ್‌ನ ಮೂರನೆ ವಾರ್ಷಿಕ ರವಿವಾರ ರಾತ್ರಿ ಸಮಾಪ್ತಿಗೊಂಡಿತು.
ಸೈಯದ್ ಅತಾವುಲ್ಲ ತಂಙಳರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರೋಪ ಸಮಾರಂಭವನ್ನು ಸೈಯದ್ ಜಲಾಲುದ್ದೀನ್ ಬುಖಾರಿ ಮಳ್‌ಹರ್‌ಉದ್ಘಾಟಿಸಿದರು. ಸೈಯದ್ ಇಬ್ರಾಹೀಮುಲ್ ಖಲೀಲುಲ್ ಬುಖಾರಿ ತಂಙಳ್‌ಕಡಲುಂಡಿ ಸ್ವಲಾತ್ ಮಜ್ಲಿಸ್‌ಗೆ ನೇತೃತ್ವ ನೀಡಿದರು.
ಪಿ.ಕೆ.ಬಾದುಷಾ ಸಖಾಫಿ ಮತ ಪ್ರವಚನ ನೀಡಿದರು. ವೇದಿಕೆಯಲ್ಲಿ ಬಾವ ಹಾಜಿ, ಉಮರ್ ಹಾಜಿ, ಅಲಿಕುಟ್ಟಿ, ಎಸ್.ಮುಹಮ್ಮದ್ ಹಾಜಿ, ಪಿ.ಕೆ.ಹನೀಫ್ ಹಾಜಿ, ಕೆ.ಎಂ.ಕೆ.ಅಬ್ದುರ್ರಹ್ಮಾನ್ ಮೊದಲಾದವರು ಉಪಸ್ಥರಿದ್ದರು. ಮಸೀದಿಯ ಕಾರ್ಯದರ್ಶಿ ಇಬ್ರಾಹೀಂ ಉಮರ್ ಹಾಜಿ ಸ್ವಾಗತಿಸಿದರು. ಶಂಸುದ್ದೀನ್ ಟಿ.ಎಚ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News