ಕುಂಬಳೆ: ಮನೆ ಅಗ್ನಿಗಾಹುತಿ
Update: 2016-02-08 23:53 IST
ಮಂಜೇಶ್ವರ, ಫೆ.8: ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಮೀನು ಕಾರ್ಮಿಕ ವಿಕಾಸ್ ಎಂಬವರ ಮನೆ ಸೋಮವಾರ ಬೆಳಗ್ಗೆ ಸಂಪೂರ್ಣ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ.
ಮನೆಯಿಂದ ಹೊಗೆಯೇಳುತ್ತಿರುವುದನ್ನು ಗಮನಿಸಿ, ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದರು. ಊರ ನಾಗರಿಕರು ಹಾಗೂ ಅಗ್ನಿ ಶಾಮಕದಳ ಬೆಂಕಿಯನ್ನು ನಿಯಂತ್ರಿಸಿದರೂ ಹೆಂಚಿನ ಮನೆ ಸಂಪೂರ್ಣ ಉರಿದು ನಾಶವಾಗಿದೆ. ಪೀಠೋಪಕರಣಗಳೂ ನಾಶವಾಗಿದ್ದು, ಸುಮಾರು 3 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ದುರಂತಕ್ಕೆ ಕಾರಣವೆಂದು ಸಂಶಯಿಸಲಾಗಿದೆ.