ಬೈಕ್ ಢಿಕ್ಕಿ: ವಲಸೆ ಕಾರ್ಮಿಕ ಮೃತ್ಯು
Update: 2016-02-08 23:55 IST
ಹಿರಿಯಡ್ಕ, ಫೆ.8: ಅಂಜಾರು ಗ್ರಾಮದ ಗೋಪಂ ಮನೆಯ ಎದುರು ಸೋಮವಾರ ಬೆಳಗ್ಗೆ 7:20ರ ಸುಮಾರಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರೊಬ್ಬರು ಮೃತ ಪಟ್ಟಿದ್ದಾರೆ.
ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕ ಫಕೀರಪ್ಪಎಂದು ಗುರುತಿಸ ಲಾಗಿದೆ. ಬೈಕ್ ಸವಾರ ಸಂದೀಪ್ ಎಂಬಾತ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಮಂಜಪ್ಪ ಎಂಬವರೊಂದಿಗೆ ಮನೆಯಿಂದ ಅಂಜಾರು ಪೇಟೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ಹಿಂದಿನಿಂದ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಹಿರಿಯಡ್ಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.