ಫೆ.13ರಂದು ಶ್ರೀ ಮಹಾವೀರ ಕಾಲೇಜಿನಲ್ಲಿ ವಾಲಿಬಾಲ್ ಪಂದ್ಯಾಟ
Update: 2016-02-09 15:16 IST
ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜಿನ ಸುವರ್ಣ ಮಹೋತ್ಸವ ಅಚರಣೆಯ ಅಂಗವಾಗಿ ಕಾಲೇಜಿನ ವಿದ್ಯಾಥಿ ್ ಸಂಘ ಮತ್ತು ಎಂ.ಕೆ ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದೊಂದಿಗೆ ಅಡಳಿತ ಮಂಡಳಿಯ ಅಧ್ಯಕ್ಷ, ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಫೆ.13ರಂದು ಕಾಲೇಜಿನ ಜಿ.ವಿ.ಪೈ ಕ್ರೀಡಾಂಗಣದಲ್ಲಿ ಗ್ರಾಮೀಣ ವಾಲಿಬಾಲ್ ಪಂದ್ಯಾಟ ಮತ್ತು ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ಪಂದ್ಯಾಟವು ನಡೆಯಲುದೆ ಎಂದು ಮಹಾವೀರ ಕಾಲೇಜಿನ ಪ್ರಭಾರ ಪ್ರಾಂಶುಪಾಲ ವಾಮನ ಬಾಳಿಗ ಮತ್ತು ಎಂ.ಕೆ. ಅನಂತ್ರಾಜ್ ದೈ.ಶಿಕ್ಷಣ. ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ತಿಳಿಸಿದ್ದಾರೆ.
ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಕ್ರೀಡಾ ನಿರ್ದೇಶಕ ರಾಜ್ ಪ್ರಸಾದ್, ವಿದ್ಯಾಥಿ ್ ಕ್ಷೆಮಪಾಲನ ಅಧಿಕಾರಿ ಹರೀಶ್, ವಿದ್ಯಾಥಿ ್ ನಾಯಕ ನೀಲ್ ಕೆನತ್ ವಾಸ್ ಹಾಗೂ ಧನರಾಜ್ ಮುಂತಾದವರು ಉಪಸ್ಥಿತರಿದ್ದರು.