ಕಿನ್ನಿಗೋಳಿ ರೋಟರಿ ಕ್ಲಬ್‌ನ ಆಶ್ರಯದಲ್ಲಿ ವೃತ್ತಿಪರ ಮಾಸಚರಣೆ ಹಾಗೂ ವೃತ್ತಿಪರ ಸನ್ಮಾನ ಸಮಾರಂಭ
Update: 2016-02-09 18:42 IST
ಮುಲ್ಕಿ, ಫೆ. 9: ಕಿನ್ನಿಗೋಳಿ ರೋಟರಿ ಕ್ಲಬ್‌ನ ಆಶ್ರಯದಲ್ಲಿ ವೃತ್ತಿಪರ ಮಾಸಚರಣೆ ಹಾಗೂ ವೃತ್ತಿಪರ ಸನ್ಮಾನ ಸಮಾರಂಭ ಕಿನ್ನಿಗೋಳಿಯ ರೋಟರಿ ರಜತಭವನದಲ್ಲಿ ನಡೆಯಿತು.
ಬಳಿಕ ಮಾತನಾಡಿದ ರೋಟರಿ ಜಿಲ್ಲೆ 3180 ವಲಯ 3 ರ ಸಹಾಯಕ ಗವರ್ನರ್ ಸತ್ಯೇಂದ್ರ ಪೈ, ವೃತ್ತಿಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಪರಿಗಣಿಸಿದಾಗ ವೃತ್ತಿಪರರ ಬದುಕು ಸಾರ್ಥಕ ಸಮಾಜ ಕೂಡಾ ಗುರುತಿಸುತ್ತದೆ ಎಂದರು.
ಇದೇ ವೇಳೆ ಹೋಟೇಲ್ ಉದ್ಯಮಿ ಕಮಲ, ರಿಕ್ಷಾ ಚಾಲಕ ಜಗನ್ನಾಥ್ ಕೋಟ್ಯಾನ್, ಪ್ರಗತಿ ಪರ ಕೃಷಿಕ ಸಂಜೀವ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಜಿಲ್ಲೆ 3180 ವಲಯ 3 ರ ವಲಯ ಸೇನಾನಿ ರಾಬರ್ಟ್ ಪ್ರಾಂಕ್ಲಿನ್ ರೇಗೊ, ಕಿನ್ನಿಗೋಳಿ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ವಿಲಿಯಂ ಸಿಕ್ವೇರಾ, ವೃತ್ತಿಪರ ಸೇವಾ ಯೋಜನಾಧಿಕಾರಿ ವೇದವ್ಯಾಸ ಉಡುಪ ಮತ್ತಿತರರು ಉಪಸ್ಥಿತರಿದ್ದರು.